ಮಂಗಳವಾರ, ಮೇ 24, 2022
26 °C

ಪ್ರಧಾನಿ ಭದ್ರತಾ ಲೋಪ ಪ್ರಕರಣ: ಸುಪ್ರೀಂ ಕೋರ್ಟ್ ವಕೀಲರಿಗೆ ಮತ್ತೆ ಬೆದರಿಕೆ ಕರೆ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

Representative Image. Credit: PTI File Photo

ನವದೆಹಲಿ: ಪಂಜಾಬ್ ಭೇಟಿಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಉಂಟಾಗಿದ್ದ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ನಡೆಸಬಾರದು ಎಂದು ಸುಪ್ರೀಂ ಕೋರ್ಟ್‌ನ ವಕೀಲ ವಿಷ್ಣು ಜೈನ್ ಅವರಿಗೆ ಬೆದರಿಕೆ ಕರೆ ಬಂದಿದೆ.

ಈ ಮೊದಲು ಜನವರಿ 12ರಂದು ಕೂಡ ವಿಷ್ಣು ಜೈನ್ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿ ವಾದಿಸಬಾರದು ಮತ್ತು ಕೂಡಲೇ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿ ಬೆದರಿಕೆ ಕರೆ ಬಂದಿತ್ತು.

ಭದ್ರತಾ ಲೋಪ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದ ಸಮಿತಿ ರಚಿಸಲಾಗಿದೆ.

ಬೆದರಿಕೆ ಕರೆ ಕುರಿತು ವಕೀಲ ವಿಷ್ಣು ಜೈನ್, ದೆಹಲಿ ಪೊಲೀಸ್ ವಿಶೇಷ ಘಟಕಕ್ಕೆ ಮಾಹಿತಿ ನೀಡಿದ್ದಾರೆ.

ಈ ಮೊದಲು ಬೆದರಿಕೆ ಒಡ್ಡಿದ್ದ ರೀತಿಯಲ್ಲಿಯೇ ಮತ್ತೆ ಕರೆ ಬಂದಿತ್ತು. ಪ್ರಕರಣದ ವಕಾಲತ್ತು ನಡೆಸಬಾರದು ಎಂದು ಕರೆ ಮಾಡಿದವರು ಒತ್ತಾಯಿಸಿದ್ದಾರೆ ಎಂದು ವಿಷ್ಣು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು