ಮಂಗಳವಾರ, ಜೂನ್ 22, 2021
26 °C

ಸುಶಾಂತ್ ಆತ್ಮಹತ್ಯೆ ಪ್ರಕರಣ ಸಿಬಿಐಗೆ: ಸುಪ್ರೀಂ ಆದೇಶಕ್ಕೆ ಟ್ವೀಟಿಗರ ಮೆಚ್ಚುಗೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Sushant Singh Rajput

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು, #CBITakesOver, 1StepToSSRJustice, #JusticeforSushantSingRajput ಮತ್ತು Finally CBI for SSR ಹ್ಯಾಷ್‌ಟ್ಯಾಗ್‌ಗಳು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿವೆ.

ಸುಶಾಂತ್ ಆತ್ಮಹತ್ಯೆ ಪ್ರಕರಣ ಸಂಬಂಧ ಪಟ್ನಾದಲ್ಲಿ ದಾಖಲಾಗಿರುವ ಎಫ್ಐಆರ್ ಅನ್ನು ಮುಂಬೈಗೆ ವರ್ಗಾಯಿಸಲು ಕೋರಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ಪ್ರಕಟಿಸಿದೆ.

ಸಿಬಿಐ ತನಿಖೆಗೆ ಆದೇಶಿಸಿರುವ ಸುಪ್ರೀಂ ಆದೇಶದಿಂದಾಗಿ ಬಹುತೇಕ ಜನರು ಖುಷಿಗೊಂಡಿದ್ದು, ಸುಶಾಂತ್ ಅವರ ಸಹೋದರಿ ಶ್ವೇತಾ ಸಿಂಗ್ ಅವರು, ದೇವರಿಗೆ ಧನ್ಯವಾದಗಳು! ನಮ್ಮ ಪ್ರಾರ್ಥನೆಗೆ ನೀವು ಉತ್ತರಿಸಿದ್ದೀರಿ!! ಆದರೆ ಇದು ಕೇವಲ ಪ್ರಾರಂಭ... ಸತ್ಯದತ್ತ ಮೊದಲ ಹೆಜ್ಜೆ! ಸಿಬಿಐ ಮೇಲೆ ಸಂಪೂರ್ಣ ನಂಬಿಕೆಯಿದೆ ಎಂದು ಟ್ವೀಟಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು  ಎಂದು ಬಲವಾಗಿ ಒತ್ತಾಯಿಸಿದ್ದ ಬಾಲಿವುಡ್ ನಟಿ ಕಂಗನಾ ಕೂಡ ಟ್ವೀಟ್ ಮಾಡಿದ್ದಾರೆ. ಮಾನವೀಯತೆ ಗೆಲ್ಲುತ್ತದೆ, ಪ್ರತಿಯೊಬ್ಬ ಎಸ್‌ಎಸ್‌ಆರ್ ಯೋಧರಿಗೆ ಅಭಿನಂದನೆಗಳು, ಮೊದಲ ಬಾರಿಗೆ ನಾನು ಸಾಮೂಹಿಕ ಪ್ರಜ್ಞೆಯಿಂದಾದ ಬಲವಾದ ಪರಿಣಾಮವನ್ನು ನಾನು ಅನುಭವಿಸಿದೆ ಎಂದಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಟ್ವೀಟ್ ಮಾಡಿ, ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದೆ. ಸತ್ಯ ಯಾವಾಗಲೂ ಮೇಲುಗೈ ಸಾಧಿಸಲಿ ಎಂದಿದ್ದಾರೆ.

ನಿತಾ ಅಂಬಾನಿ ಎಂಬ ಹೆಸರಿನ ಟ್ವಿಟರ್ ಬಳಕೆದಾರರು, ಅಭಿನಂದನೆಗಳು ಸುಶಾಂತ್ ಸಿಂಗ್ ರಜಪೂತಿಗರೇ. ಎಸ್‌ಎಸ್‌ಆರ್ ಕೊಲೆ ಪ್ರಕರಣವನ್ನು ಅಂತಿಮವಾಗಿ ಸಿಬಿಐ ನಿರ್ವಹಿಸುತ್ತದೆ. ಸುಪ್ರೀಂ ಕೋರ್ಟಿನ ತೀರ್ಪು ಮೀಮ್ ಪೊಲೀಸರು ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ದೊಡ್ಡ ಹೊಡೆತವಾಗಿದೆ ಎಂದು ಬರೆದುಕೊಂಡಿದ್ದಾರೆ.

ನಿತಾ ಅಂಬಾನಿ ಎಂಬ ಹೆಸರಿನ ಟ್ವಿಟರ್ ಬಳಕೆದಾರರು, ಅಭಿನಂದನೆಗಳು ಸುಶಾಂತ್ ಸಿಂಗ್ ರಜಪೂತಿಗರೇ. ಎಸ್‌ಎಸ್‌ಆರ್ ಕೊಲೆ ಪ್ರಕರಣವನ್ನು ಅಂತಿಮವಾಗಿ ಸಿಬಿಐ ನಿರ್ವಹಿಸುತ್ತದೆ. ಸುಪ್ರೀಂ ಕೋರ್ಟಿನ ತೀರ್ಪು ಮೀಮ್ ಪೊಲೀಸರು ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ದೊಡ್ಡ ಹೊಡೆತವಾಗಿದೆ ಎಂದು ಬರೆದುಕೊಂಡಿದ್ದಾರೆ.

ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆ!! ನ್ಯಾಯ ಸಿಗುವವರೆಗೂ ನಾವು ನಿಲ್ಲಿಸುವುದಿಲ್ಲ ಎಂದು ಅಮಿತ್ ಕುಮಾರ್ ಎನ್ನುವವರು ತಿಳಿಸಿದ್ದಾರೆ.

ಟ್ವಿಟರ್‌ನಲ್ಲಿ ವ್ಯಕ್ತವಾಗಿರುವ ಇನ್ನಿತರೆ ಪ್ರತಿಕ್ರಿಯೆಗಳು ಇಲ್ಲಿವೆ ನೋಡಿ...

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು