ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ರಿಚಾರ್ಜ್: ಸುಳ್ಳು ಸಂದೇಶಗಳ ಬಗ್ಗೆ ಎಚ್ಚರ ಇರಲಿ

ಆನ್‌ಲೈನ್‌ ಶಿಕ್ಷಣ ಪಡೆಯಲು ಉಚಿತ ರಿಚಾರ್ಜ್‌ ಸೌಲಭ್ಯ ಸಂದೇಶಕ್ಕೆ ಮೋಸ ಹೋಗದಿರಿ
Last Updated 22 ಏಪ್ರಿಲ್ 2021, 14:04 IST
ಅಕ್ಷರ ಗಾತ್ರ

ನವದೆಹಲಿ: ಆನ್‌ಲೈನ್‌ ಶಿಕ್ಷಣ ಪಡೆಯಲು 10 ಕೋಟಿ ಮಂದಿಗೆ ಉಚಿತವಾಗಿ ರಿಚಾರ್ಜ್‌ ಪಡೆಯುವ ಸೌಲಭ್ಯ ಕಲ್ಪಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ ಎನ್ನುವ ಸುದ್ದಿಯನ್ನು ಸಾರ್ವಜನಿಕರು ನಂಬಬಾರದು ಎಂದು ದೂರಸಂಪರ್ಕ ಉದ್ಯಮ ತಿಳಿಸಿದೆ.

‘ಇದೊಂದು ಸುಳ್ಳು ಸುದ್ದಿ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸಂದೇಶಗಳನ್ನು ಬಿತ್ತರಿಸಲಾಗುತ್ತಿದೆ. ದುರುದ್ದೇಶದಿಂದ ಕೆಲವರು ಇಂತಹ ಕೃತ್ಯವೆಸಗುತ್ತಿದ್ದಾರೆ. ಉಚಿತ ರಿಚಾರ್ಜ್‌ ಪಡೆಯುವ ಸುಳ್ಳು ಸಂದೇಶದ ಜತೆ ಲಿಂಕ್‌ ಅನ್ನು ಕಳುಹಿಸಲಾಗುತ್ತಿದೆ. ಉಚಿತ ಸೌಲಭ್ಯಕ್ಕಾಗಿ ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡುವಂತೆ ಉತ್ತೇಜಿಸಲಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕು’ ಎಂದು ಸೆಲ್ಯೂಲರ್‌ ಆಪರೇಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಸಿಒಎಐ) ಬುಧವಾರ ತಿಳಿಸಿದೆ.

‘ಈ ಹಗರಣದ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಬಯಸುತ್ತೇವೆ. ಇಂತಹ ಸಂದೇಶಗಳ ಬಂದರೆ ಲಿಂಕ್‌ ಮೇಲೆ ಕ್ಲಿಕ್‌ ಮಾಡಬೇಡಿ. ಒಂದು ವೇಳೆ ಲಿಂಕ್‌ ಅನ್ನು ಒತ್ತಿದರೆ ಮೊಬೈಲ್‌ನಲ್ಲಿನ ಮಾಹಿತಿಯನ್ನು ಕಳ್ಳತನ ಮಾಡುವ ಸಾಧ್ಯತೆ ಇದೆ. ಜತೆಗೆ, ಇತರ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು’ ಎಂದು ಸಿಒಎಐ ತಿಳಿಸಿದೆ.

’ಈ ರೀತಿಯ ಸಂದೇಶಗಳು ಬಂದರೆ ಅಳಸಿ ಹಾಕಬೇಕು ಮತ್ತು ಇತರರಿಗೆ ಕಳುಹಿಸಬಾರದು. ಸರಳವಾಗಿ ಇಂತಹ ಸಂದೇಶಗಳನ್ನು ತೆಗೆದುಹಾಕುವುದರಿಂದ ಮತ್ತು ಇತರರಿಗೆ ಕಳುಹಿಸದೆಯೇ ದುಷ್ಕೃತ್ಯಗಳನ್ನು ತಡೆಯಲು ಸಾಧ್ಯ. ಇತರರು ಸಹ ವಂಚನೆಗೆ ಒಳಗಾಗದಂತೆ ತಡೆಯಬೇಕು’ ಎಂದು ಅದು ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT