ಮಂಗಳವಾರ, ಸೆಪ್ಟೆಂಬರ್ 27, 2022
27 °C

ಭಯೋತ್ಪಾದನಾ ಜಾಲ ಭೇದಿಸಿದ ಪಂಜಾಬ್‌ ಪೊಲೀಸರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ (ಪಿಟಿಐ): ಭಾರತವು 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಮುನ್ನಾ ದಿನವೇ ಪಂಜಾಬ್ ಪೊಲೀಸರು ಪಾಕಿಸ್ತಾನದ ಐಎಸ್‌ ಬೆಂಬಲಿತ ಭಯೋತ್ಪಾದನಾ ಜಾಲವನ್ನು ಭಾನುವಾರ ಭೇದಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ.

ಮೂರು ಕೈಬಾಂಬ್‌ಗಳು, ಒಂದು ಸುಧಾರಿತ ಸ್ಫೋಟಕ ಸಾಧನ (ಐಇಡಿ), ಎರಡು ಪಿಸ್ತೂಲ್‌ಗಳು ಮತ್ತು 40 ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇವರನ್ನು ಬಂಧಿಸಲು ಪಂಜಾಬ್ ಪೊಲೀಸರು ಮತ್ತು ದೆಹಲಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.

‘ಸ್ವಾತಂತ್ರ್ಯ ದಿನದ ಮುಂಚಿನ ದಿನ, ಪಂಜಾಬ್ ಪೊಲೀಸರು ಪ್ರಮುಖ ಭಯೋತ್ಪಾದಕ ಸಂಘಟನೆಯ ಬೆದರಿಕೆಯನ್ನು ವಿಫಲಗೊಳಿಸಿದ್ದಾರೆ. ದೆಹಲಿ ಪೊಲೀಸರ ಸಹಾಯದಿಂದ ಪಾಕಿಸ್ತಾನದ ಐಎಸ್ ಬೆಂಬಲಿತ ಭಯೋತ್ಪಾದನಾ ಘಟಕವನ್ನು ನಾಶಪಡಿಸಲಾಗಿದೆ. ಕೆನಡಾ ಮೂಲದ ಅರ್ಶ್ ದಲ್ಲಾ ಮತ್ತು ಆಸ್ಟ್ರೇಲಿಯಾ ಮೂಲದ ಗುರ್ಜಂತ್ ಸಿಂಗ್‌ ಜೊತೆ ನಂಟು ಹೊಂದಿದ್ದ 4 ಉಗ್ರರನ್ನು ಬಂಧಿಸಲಾಗಿದೆ’ ಎಂದು ಪಂಜಾಬ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು