ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ರಾಜ್ಯಪಾಲರ ನಡೆಗೆ ಎಡಿಟರ್ಸ್ ಗಿಲ್ಡ್‌ ಖಂಡನೆ

ಪತ್ರಕರ್ತರನ್ನು ಸುದ್ದಿಗೋಷ್ಠಿಯಿಂದ ಹೊರಗಿಟ್ಟಿದ್ದ ಆರಿಫ್‌ ಮೊಹಮ್ಮದ್‌ ಖಾನ್‌
Last Updated 9 ನವೆಂಬರ್ 2022, 14:07 IST
ಅಕ್ಷರ ಗಾತ್ರ

ಬೆಂಗಳೂರು:ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರು ಇತ್ತೀಚೆಗೆ ಸುದ್ದಿಗೋಷ್ಠಿಯಿಂದ ಎರಡು ಸುದ್ದಿವಾಹಿನಿಗಳ ಪತ್ರಕರ್ತರನ್ನು ಹೊರಗೆ ಕಳುಹಿಸಿದ ಕ್ರಮಕ್ಕೆ ಭಾರತೀಯ ಸಂಪಾದಕರ ಒಕ್ಕೂಟದ (ಎಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ) ತೀವ್ರ ವಿರೋಧ ವ್ಯಕ್ತಪಡಿಸಿದೆ.

ನವೆಂಬರ್‌ 7ರಂದು ಕೊಚ್ಚಿಯಲ್ಲಿ ನಿಗದಿಯಾಗಿದ್ದ ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ, ‘ಕೈರಳಿ’ ಮತ್ತು ‘ಮೀಡಿಯಾ ಒನ್‌’ನ ಸುದ್ದಿವಾಹಿನಿಗಳ ಪತ್ರಕರ್ತರು ಸುದ್ದಿಗೋಷ್ಠಿಯಿಂದ ಹೊರ ಹೋಗಬೇಕು ಎಂದುರಾಜ್ಯಪಾಲರು ಸೂಚನೆ ನೀಡಿದ್ದರು. ಈ ಸುದ್ದಿವಾಹಿನಿಗಳ ಪತ್ರಕರ್ತರು ಹೊರನಡೆದ ನಂತರವಷ್ಟೇ ಮಾಧ್ಯಮದವರೊಂದಿಗೆ ಸಂವಾದ ಆರಂಭಿಸಿದ್ದರು.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಭಾರತೀಯ ಸಂಪಾದಕರ ಒಕ್ಕೂಟ, ಉನ್ನತ ಸಾಂವಿಧಾನಕ ಹುದ್ದೆಯಲ್ಲಿರುವ ಮತ್ತು ಮಾಧ್ಯಮ ಸ್ವತಂತ್ರ ಸೇರಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಜವಾಬ್ದಾರಿ ಹೊತ್ತವರು ಈ ರೀತಿ ಕೆಲ ಮಾಧ್ಯಮಗಳನ್ನು ಗುರಿಯಾಗಿಸುತ್ತಿರುವುದು ತೀವ್ರ ನೋವುಂಟು ಮಾಡಿದೆ. ಅಧಿಕಾರದಲ್ಲಿ ಇರುವವರನ್ನು ಟೀಕಿಸುವ ಅಧಿಕಾರ ಮಾಧ್ಯಮಗಳಿಗೆ ಇದೆ. ಆದರೆ ಇಂಥ ಟೀಕೆಯೇ ಸುದ್ದಿಗೋಷ್ಠಿಯಿಂದ ಮಾಧ್ಯಮಗಳನ್ನು ಹೊರಗಿಡಲು ಕಾರಣವಾಗಬಾರದು ಎಂದು ತಿಳಿಸಿದೆ.

ಮಾಧ್ಯಮ ಸ್ವಾತಂತ್ರ್ಯವನ್ನು ಗೌರವಿಸುವ ಮತ್ತು ಪ್ರತಿಯೊಂದು ಮಾಧ್ಯಮಕ್ಕೂ ಸರ್ಕಾರದ ವ್ಯವಹಾರಗಳ ಕುರಿತ ವರದಿಗಾರಿಕೆಗೆ ಪೂರ್ಣ ಪ್ರಮಾಣದಲ್ಲಿ ಅವಕಾಶ ನೀಡಬೇಕಾದ ಅಗತ್ಯವಿದೆ ಎಂದೂ ಒಕ್ಕೂಟ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT