ಗುರುವಾರ , ಮಾರ್ಚ್ 23, 2023
21 °C

ಪ್ರತಿ ತಿಂಗಳ 3ರಂದು ‘ಲಖಿಂಪುರ ಕಿಸಾನ್‌ ಸ್ಮರಣೆ ದಿವಸ’ ಆಚರಣೆ: ಸಮಾಜವಾದಿ ಪಕ್ಷ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ಅಕ್ಟೋಬರ್‌ 3 ರಂದು ಲಖಿಂಪುರ–ಖೇರಿ ಹಿಂಸಾಚಾರ ಮತ್ತು ಬಿಜೆಪಿಯ ಕ್ರೌರ್ಯದ ಬಗ್ಗೆ ಜನರಿಗೆ ನೆನಪಿಸಲು ಪ್ರತಿ ತಿಂಗಳ 3ರಂದು ‘ಲಖಿಂಪುರ ಕಿಸಾನ್‌ ಸ್ಮರಣೆ ದಿವಸ’ ಎಂದು ಆಚರಿಸುವಂತೆ ಸಮಾಜವಾದಿ ಪಕ್ಷವು (ಎಸ್‌ಪಿ) ಮಂಗಳವಾರ ತನ್ನ ಎಲ್ಲಾ ಕಾರ್ಯಕರ್ತರು ಮತ್ತು ಮಿತ್ರರಿಗೆ ಕರೆ ನೀಡಿದೆ. 

ಹಿಂಸಾಚಾರದಲ್ಲಿ ಮೃತಪಟ್ಟ ಎಂಟು ಜನರ ಪೈಕಿ ನಾಲ್ವರು ರೈತರು. ಬಿಜೆಪಿ ಕಾರ್ಯಕರ್ತರನ್ನು ಕರೆದೊಯ್ಯುತ್ತಿದ್ದ ವಾಹನ ಇದ್ದಕ್ಕಿದ್ದಂತೆ  ಬಂದು ಗುದ್ದಿದ ಪರಿಣಾಮ ಪ್ರತಿಭಟನೆ ನಡೆಸುತ್ತಿದ್ದ ರೈತರು ಮತ್ತು ಇತರರು ಸಾವವನ್ನಪ್ಪಿದರು. ಇದರಿಂದ ಕುಪಿತಗೊಂಡ ರೈತರು ವಾಹನದಲ್ಲಿದ್ದ ಕೆಲವರನ್ನು ಥಳಿಸಿದ್ದರು. ಮೃತರಲ್ಲಿ ರೈತರನ್ನು ಹೊರತುಪಡಿಸಿ ಇಬ್ಬರು ಬಿಜೆಪಿ ಕಾರ್ಯಕರ್ತರು, ವಾಹನದ ಚಾಲಕ ಮತ್ತು ಪತ್ರಕರ್ತ ಇದ್ದರು.  

ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಷಿಶ್‌ ಮಿಶ್ರಾ  ವಾಹದಲ್ಲಿದ್ದರು ಎಂದು ರೈತರು ಆರೋಪಿಸಿದ್ದರು. ಆದರೆ ಇದನ್ನು ಸಚಿವರು ಮತ್ತು ಅವರ ಪುತ್ರ ನಿರಾಕರಿಸಿದ್ದರು. 

‘ಬಿಜೆಪಿಯ ಕ್ರೌರ್ಯವನ್ನು ಜನರಿಗೆ ನೆನಪಿಸಲು ಎಲ್ಲಾ ಉತ್ತರ ಪ್ರದೇಶದ ನಿವಾಸಿಗಳು, ರೈತರ ಹಿತೈಷಿಗಳು, ಎಸ್‌ಪಿ ಕಾರ್ಯಕರ್ತರು ಮತ್ತು ಮಿತ್ರ ಪಕ್ಷಗಳು ಪ್ರತಿ ತಿಂಗಳ 3ರಂದು ‘ಲಖಿಂಪುರ ಕಿಸಾನ್‌ ಸ್ಮರಣ ದಿವಸ’ ಎಂದು ಆಚರಿಸುವಂತೆ ಮನವಿ ಮಾಡಲಾಗಿದೆ’ ಎಂದು ಸಮಾಜವಾದಿ ಪಕ್ಷ ಟ್ವೀಟ್‌ ಮಾಡಿದೆ. 

ನವೆಂಬರ್‌ 3ರ ದೀಪಾವಳಿಯಂದು ರೈತರಿಗೆ ಗೌರವ ಸಲ್ಲಿಸಲು ಪ್ರತಿಯೊಬ್ಬರೂ ಮಣ್ಣಿನ ದೀಪವೊಂದನ್ನು ಬೆಳಗಬೇಕು ಎಂದೂ ಅದು ಹೇಳಿದೆ.  

ಲಿಖಿಂಪುರ–ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಆಶಿಶ್‌ ಮಿಶ್ರಾ ಸೇರಿದಂತೆ ಹಲವು ಆರೋಪಿಗಳು ಜೈಲಿನಲ್ಲಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು