ಉತ್ತರಪ್ರದೇಶ: ಶಾಲೆಗೆ ಹೊರಟಿದ್ದ ಮೂವರು ಬಾಲಕಿಯರು ನಾಪತ್ತೆ

ಶಹಜಹಾನ್‌ಪುರ(ಉತ್ತರ ಪ್ರದೇಶ): ಮನೆಯಿಂದ ಶಾಲೆಗೆ ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.
‘15 ವರ್ಷದ ಇಬ್ಬರು ಬಾಲಕಿಯರು ಮತ್ತು 10 ವರ್ಷದ ಒಬ್ಬ ಬಾಲಕಿ ನಾಪತ್ತೆಯಾಗಿದ್ದಾಳೆ. ಈ ಮೂವರು ಬಾಲಕಿಯರು ಸದರ್ ಪ್ರದೇಶದಲ್ಲಿ ಪ್ರತ್ಯೇಕ ಸ್ಥಳದಲ್ಲಿ ವಾಸವಾಗಿದ್ದರು.ಈ ಮೂವರು ಸೋಮವಾರ ಶಾಲೆಗೆಂದು ಮನೆಯಿಂದ ಹೊರಟಿದ್ದರು.
ಇದರಲ್ಲಿ ಒಬ್ಬಳ ಬಳಿ ₹2500 ಮತ್ತು ಇನ್ನೊಬ್ಬಳ ಬಳಿ ₹2700 ಇತ್ತು. ಮತ್ತೊಬ್ಬ ಬಾಲಕಿಯ ಬಳಿ ಬಟ್ಟೆಗಳಿದ್ದವು. ಈಕೆ ಶಾಲೆಯ ಕಾರ್ಯಕ್ರಮಕ್ಕಾಗಿ ಬಟ್ಟೆಯನ್ನು ಕೊಂಡೊಯ್ಯುತ್ತಿದ್ದೇನೆ ಎಂದು ಪೋಷಕರಲ್ಲಿ ಹೇಳಿ, ಮನೆಯಿಂದ ತೆರಳಿದ್ದಳು’ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್.ಆನಂದ್ ಅವರು ತಿಳಿಸಿದರು.
‘ನಾಪತ್ತೆಯಾಗಿರುವ ಮೂವರು ಬಾಲಕಿಯರನ್ನು ಹುಡುಕಲು ಮೂರು ತಂಡಗಳನ್ನು ರಚಿಸಲಾಗಿದೆ’ ಎಂದು ಅವರು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.