ಧರ್ಮಶಾಲಾ: ಇಲ್ಲಿನ ಟಿಬೆಟ್ ಸಂಸತ್ಗೆ ಸದಸ್ಯರನ್ನು ಆಯ್ಕೆ ಮಾಡಲು ಭಾರತ ಸೇರಿದಂತೆ 26 ದೇಶಗಳಲ್ಲಿನ ಟಿಬಿಟಿಯನ್ನರು ಭಾನುವಾರ ಮತ ಚಲಾಯಿಸಿದರು.

ಟಿಬೆಟಿಯನ್ ಸಂಸತ್ ಎಂದು ಕರೆಯಲಾಗುವ ಕೇಂದ್ರೀಯ ಟಿಬೆಟನ್ ಆಡಳಿತಕ್ಕೆ (ಸಿಟಿಎ) ಸದಸ್ಯರನ್ನು ಮತದಾರರು ಆಯ್ಕೆ ಮಾಡಲಿದ್ದಾರೆ ಎಂದು ಟಿಬೆಟಿಯನ್ ಮುಖ್ಯ ಚುನಾವಣಾ ಆಯುಕ್ತ ವಾಂಗ್ಡು ಸೆರಿಂಗ್ ತಿಳಿಸಿದ್ದಾರೆ.

ಸಿಟಿಎ 45 ಸದಸ್ಯರನ್ನು ಒಳಗೊಂಡಿದೆ. ಇದು ಅಂತಿಮ ಹಂತದ ಮತದಾನವಾಗಿದೆ. ಮುಂದಿನ ಸಿಕ್ಯೊಂಗ್ (ಅಧ್ಯಕ್ಷ) ಆಯ್ಕೆ ಮಾಡಲು ಸಹ ಈ ಚುನಾವಣೆ ನಿರ್ಣಾಯಕವಾಗಿದೆ. ಮೇ 14ರಂದು ಮುಖ್ಯಸ್ಥರ ಆಯ್ಕೆ ನಡೆಯಲಿದೆ.

ಅಧ್ಯಕ್ಷ ಸ್ಥಾನಕ್ಕೆ ಪೆಂಪಾ ಸೆರಿಂಗ್ ಮತ್ತು ಔಕಾತಸಾಂಗ್ ಕೆಲ್ಸಾಂಗ್ ದೊರ್ಜಿ ಮಾತ್ರ ಕಣದಲ್ಲಿದ್ದಾರೆ. ಟಿಬೆಟ್ ಸಂಸತ್ ಮಾಜಿ ಅಧ್ಯಕ್ಷ ಪೆಂಪಾ ಆಯ್ಕೆ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗಿದೆ.

ಅಧ್ಯಕ್ಷರು ಸಂಪುಟದ ಮುಖ್ಯಸ್ಥರಾಗಿರುತ್ತಾರೆ. 2011ರಲ್ಲಿ ಈ ಹುದ್ದೆಯನ್ನು ಸೃಷ್ಟಿಸಲಾಗಿತ್ತು.

ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ 1.3 ಲಕ್ಷ ಟಿಬೆಟಿಯನ್ನರು ವಾಸಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.