ಪಶ್ಚಿಮ ಬಂಗಾಳದಲ್ಲಿ ‘ಗೋಲಿ ಮಾರೋ’ ಘೋಷಣೆ: ಅಂತರ ಕಾಯ್ದುಕೊಂಡ ಟಿಎಂಸಿ

ಕೋಲ್ಕತ್ತ: ಪಕ್ಷದ ಬೆಂಬಲಿಗರು ‘ಗೋಲಿ ಮಾರೋ’ ಎಂದು ಘೋಷಣೆ ಕೂಗಿರುವುದರಿಂದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಂತರ ಕಾಯ್ದುಕೊಂಡಿದೆ.
ರ್‍ಯಾಲಿಯೊಂದರ ವೇಳೆ ಕೆಲವು ಟಿಎಂಸಿ ಬೆಂಬಲಿಗರು ‘ಬಂಗಾಳದ ದೇಶದ್ರೋಗಿಗಳಿಗೆ ಗುಂಡಿಕ್ಕಿ’ ಎಂದು ಘೋಷಣೆ ಕೂಗಿದ್ದರು.
ಕೆಲವು ಯುವ ಬೆಂಬಲಿಗರು ‘ಅತಿಯಾದ ಉತ್ಸಾಹ’ದಿಂದ ಹಾಗೆ ಘೋಷಣೆ ಕೂಗಿರಬಹುದು. ಆದರೆ, ಪಕ್ಷವು ಅದನ್ನು ಬೆಂಬಲಿಸುವುದಿಲ್ಲ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.
ಓದಿ: ನಂದಿಗ್ರಾಮ: ಹೋರಾಟದ ತಾಣದಲ್ಲಿ ಕೋಮು ಧ್ರುವೀಕರಣ
‘ರ್‍ಯಾಲಿಗಳಲ್ಲಿ ಅಂಥ ಘೋಷಣೆಗಳನ್ನು ಕೂಗಬಾರದು. ಅಂತಹ ಘೋಷಣೆ ಕೂಗಿದ್ದು ಸರಿಯಲ್ಲ. ‘ಗೋಲಿ ಮಾರೋ’ ಎಂಬುದನ್ನು ಕೇವಲ ಆ ಪದದ ಅರ್ಥವಾಗಿಯಷ್ಟೇ ಗಣನೆಗೆ ತೆಗೆದುಕೊಳ್ಳಬಾರದು’ ಎಂದೂ ಅವರು ಹೇಳಿದ್ದಾರೆ.
ದಕ್ಷಿಣ ಕೋಲ್ಕತ್ತದಲ್ಲಿ ಮಂಗಳವಾರ ನಡೆದ ‘ಶಾಂತಿ ರ್‍ಯಾಲಿ’ಯಲ್ಲಿ ಕೆಲವು ಟಿಎಂಸಿ ಬೆಂಬಲಿಗರು ಘೋಷಣೆ ಕೂಗಿದ್ದರು. ರ್‍ಯಾಲಿಯಲ್ಲಿ ಟಿಎಂಸಿ ಸರ್ಕಾರದ ಇಬ್ಬರು ಸಚಿವರೂ ಭಾಗವಹಿಸಿದ್ದರು.
2020ರ ಜನವರಿಯಲ್ಲಿ ದೆಹಲಿಯಲ್ಲಿ ಬಿಜೆಪಿ ನಾಯಕರೊಬ್ಬರು ಇಂಥದ್ದೇ (ದೇಶದ್ರೋಹಿಗಳಿಗೆ ಗುಂಡಿಕ್ಕಿ) ಘೋಷಣೆ ಕೂಗಿದ್ದು ದೇಶದಾದ್ಯಂತ ಆಕ್ಷೇಪಕ್ಕೆ ಗುರಿಯಾಗಿತ್ತು. ಇತರ ಪ್ರತಿಪಕ್ಷಗಳ ಜತೆಗೆ ಟಿಎಂಸಿಯು ಘೋಷಣೆಯನ್ನು ತೀವ್ರವಾಗಿ ಖಂಡಿಸಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.