ಶನಿವಾರ, ಏಪ್ರಿಲ್ 17, 2021
31 °C

ಸುವೇಂದು ನಾಮಪತ್ರ ವಜಾಕ್ಕೆ ಟಿಎಂಸಿ ಕೋರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಎದುರು ನಂದಿಗ್ರಾಮದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರ ಹೆಸರು ಹಲ್ದಿಯಾ ಮತ್ತು ನಂದಿಗ್ರಾಮ ಎರಡೂ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ‘ಇರುವಂತೆ ತೋರುತ್ತಿದೆ’. ಹಾಗಾಗಿ, ಅವರ ನಾಮಪತ್ರವನ್ನು ವಜಾ ಮಾಡಬೇಕು ಎಂದು ಚುನಾವಣಾ ಆಯೋಗವನ್ನು ಟಿಎಂಸಿ ಒತ್ತಾಯಿಸಿದೆ. ಮಮತಾ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಅವರ ಒಂದು ಕಾಲದ ಪರಮಾಪ್ತ ಸುವೇಂದು ಇತ್ತೀಚೆಗೆ ಆಗ್ರಹಿಸಿದ್ದರು. 

ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 17ರ ಪ್ರಕಾರ, ಒಬ್ಬ ವ್ಯಕ್ತಿಯ ಹೆಸರು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಇರುವಂತಿಲ್ಲ ಎಂದು ನಂದಿಗ್ರಾಮ ಚುನಾವಣಾಧಿಕಾರಿಗೆ ಬರೆದ ಪತ್ರದಲ್ಲಿ ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್‌ ಒ ಬ್ರಯಾನ್‌ ಹೇಳಿದ್ದಾರೆ. 

ಹಲ್ದಿಯಾ ಕ್ಷೇತ್ರದಿಂದ ನಂದಿಗ್ರಾಮಕ್ಕೆ ತಮ್ಮ ಹೆಸರು ವರ್ಗಾಯಿಸುವಂತೆ ಸುವೇಂದು ಅವರು ಅರ್ಜಿ ಸಲ್ಲಿಸಿದಂತೆ ಕಾಣಿಸುತ್ತಿದೆ. ಆದರೆ, ನಂದಿಗ್ರಾಮದ ನಿವಾಸಿ ತಾವು ಎಂದು ಸುವೇಂದು ಅವರು ಸುಳ್ಳು ಮಾಹಿತಿ ನೀಡಿದ್ದಾರೆ. ಮತಗಟ್ಟೆ ಮಟ್ಟದ ಅಧಿಕಾರಿಯು ಪರಿಶೀಲನೆಗಾಗಿ ಸುವೇಂದು ಅವರ ನಿವಾಸಕ್ಕೆ ಹೋದಾಗ ಅಲ್ಲಿ ಅವರು ಇರಲಿಲ್ಲ. ಸುವೇಂದು ಅವರು ಅವರೇ ಸೂಚಿಸಿರುವ ನಂದನಯಕಬರ್‌ ಗ್ರಾಮದಲ್ಲಿ ಕಳೆದ ಆರು ತಿಂಗಳಿನಿಂದ ವಾಸಿಸುತ್ತಿಲ್ಲ. ಅವರು ಅಲ್ಲಿನ ಕಾಯಂ ನಿವಾಸಿಯಂತು ಅಲ್ಲವೇ ಅಲ್ಲ ಎಂದು ಡೆರೆಕ್ ಅವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು