ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಕಟ ಸಂಬಂಧ ವೃದ್ಧಿಗೆ ದಕ್ಷಿಣ ಕೊರಿಯಾ–ಚೀನಾ ವಾಗ್ದಾನ

Last Updated 10 ಆಗಸ್ಟ್ 2022, 3:34 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾ ಮತ್ತು ಅಮೆರಿಕ ನಡುವಿನ ಪೈಪೋಟಿ ತೀವ್ರಗೊಳ್ಳುತ್ತಿರುವ ಸಮಯದಲ್ಲಿ ದಕ್ಷಿಣ ಕೊರಿಯಾ ಮತ್ತು ಚೀನಾದ ಉನ್ನತ ರಾಜತಾಂತ್ರಿಕರು ನಿಕಟ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಮತ್ತು ಸ್ಥಿರವಾದ ಕೈಗಾರಿಕಾ ಪೂರೈಕೆ ಸರಪಳಿಗಳನ್ನು ನಿರ್ವಹಿಸಲು ಮಂಗಳವಾರ ವಾಗ್ದಾನ ಮಾಡಿದರು.

ತೈವಾನ್‌ ವಿಷಯ ಕುರಿತಾದ ಅಮೆರಿಕ-ಚೀನಾ ಸಂಘರ್ಷವು ಎರಡೂ ದೇಶಗಳೊಂದಿಗೆ ಸೌಹಾರ್ದಯುತ ಸಂಬಂಧಗಳನ್ನು ಬಯಸುವ ಸರ್ಕಾರಗಳಿಗೆ ತೊಡಕುಗಳನ್ನು ಹೆಚ್ಚಿಸಿದ್ದು, ಅಮೆರಿಕದ ದೀರ್ಘಾವಧಿಯ ಮಿತ್ರರಾಷ್ಟ್ರವಾದ ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಚೀನಾ ನಡುವೆ ಸಮತೋಲನವನ್ನು ಸಾಧಿಸಲು ಹೆಣಗಾಡುತ್ತಿದೆ.

ದಕ್ಷಿಣ ಕೊರಿಯಾ ವಿದೇಶಾಂಗ ಸಚಿವ ಪಾರ್ಕ್ ಜಿನ್ ಮತ್ತು ಚೀನಾದ ವಾಂಗ್ ಯಿ ಅವರು, ಪೂರ್ವ ಚೀನಾದ ಕಿಂಗ್ಡಾವೊದಲ್ಲಿ ನಡೆದ ಸಭೆಯ ಬಳಿಕ ಪ್ರತ್ಯೇಕ ಹೇಳಿಕೆಗಳಲ್ಲಿ ಮೂರು ದಶಕಗಳ ಯಶಸ್ವಿ ವಾಣಿಜ್ಯ ಸಂಬಂಧಗಳ ಆಧಾರದ ಮೇಲೆ ಬಾಂಧವ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕರೆ ನೀಡಿದರು.

ಪೂರೈಕೆ ಸರಪಳಿ ಸಮಸ್ಯೆಗಳು, ಹವಾಮಾನ ಬದಲಾವಣೆಯ ಸಹಕಾರ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಅನುಕೂಲವಾಗುವಂತೆ ಉನ್ನತ ಮಟ್ಟದ ಸಂವಹನವನ್ನು ಹೆಚ್ಚಿಸಲು ದೇಶಗಳು ಒಪ್ಪಿಕೊಂಡಿವೆ ಎಂದು ಕೊರಿಯಾ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಆದರೆ, ಚೀನಾವು ತನ್ನದೇ ಭೂಪ್ರದೇಶವೆಂದು ಹೇಳಿಕೊಳ್ಳುವ ತೈವಾನ್‌ಗೆ ಅಮೆರಿಕದ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿ ಮತ್ತು ಆ ನಂತರದ ಉದ್ವಿಗ್ನತೆ ಕುರಿತು ಚರ್ಚಿಸಿರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT