ಸೋಮವಾರ, ಆಗಸ್ಟ್ 15, 2022
25 °C

ಚೋಕ್ಸಿ ಅಪಹರಣಕ್ಕೆ ಸಂಚು ಆರೋಪ ಅಸಂಬದ್ಧ: ಡೊಮಿನಿಕಾ ಪ್ರಧಾನಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಹುಕೋಟಿ ಹಗರಣದ ಆರೋಪಿ, ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಆಂಟಿಗುವಾದಿಂದ ಬಾರ್ಬುಡಾಗೆ ಅಪಹರಿಸುವಲ್ಲಿ ಡೊಮಿನಿಕಾ ಸರ್ಕಾರದ ಕೈವಾಡವಿದೆ ಎಂಬ ಆರೋಪವನ್ನು ಅಲ್ಲಗಳೆದಿರುವ ಡೊಮಿನಿಕಾ ಪ್ರಧಾನಿ ರೂಸ್‌ವೆಲ್ಟ್‌ ಸ್ಕೆರ‍್ರಿಟ್‌, ‘ಇದೊಂದು ಅಸಂಬಂದ್ಧ’ ಆರೋಪ ಎಂದಿರುವುದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

'ಚೋಕ್ಸಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತನ್ನ ಕಾನೂನು ಪ್ರಕ್ರಿಯೆ ನಡೆಸಲು ನಮ್ಮ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಸಂದರ್ಭದಲ್ಲಿ ಚೋಕ್ಸಿಯ ಹಕ್ಕುಗಳು ಮತ್ತು ಆಕ್ಷೇಪಗಳನ್ನೂ ಗೌರವಿಸಲಾಗುವುದು ಎಂಬುದಾಗಿ ಕಾರ್ಯಕ್ರಮಯೊಂದರಲ್ಲಿ ಸ್ಕೆರ‍್ರಿಟ್‌ ಅವರು ಭರವಸೆ ನೀಡಿದ್ದರು‘ ಎಂದು ‘ಡೊಮಿನಿಕಾ ನ್ಯೂಸ್ ಆನ್‌ಲೈನ್’ ವರದಿ ಮಾಡಿದೆ.

ಆಂಟಿಗುವಾದಿಂದ ಬಾರ್ಬುಡಾಕ್ಕೆ ಚೋಕ್ಸಿಯನ್ನು ಅಪಹರಿಸಲು ಭಾರತ ಮತ್ತು ಡೊಮಿನಿಕಾ ಸರ್ಕಾರಗಳು ಸಂಚು ರೂಪಿಸಿದ್ದವು ಎಂಬ ಆರೋಪಗಳನ್ನು ಸಹ ಅವರು ಅಲ್ಲಗಳೆದಿದ್ದಾರೆ ಎಂದು ಆನ್‌ಲೈನ್ ಪೋರ್ಟೆಲ್ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು