ಸೋಮವಾರ, ಸೆಪ್ಟೆಂಬರ್ 20, 2021
28 °C

ಕೈಗಾರಿಕೆಗೆ ಬಳಸುವ ಶುದ್ಧೀಕರಿಸಿದ ತ್ಯಾಜ್ಯ ನೀರಿಗೆ ಶೇ 18ರಷ್ಟು ಜಿಎಸ್‌ಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಂಸ್ಕರಿಸಿ ಮತ್ತು ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ಜಿಎಸ್‌ಟಿ ಕಾಯ್ದೆಯಡಿ 'ನೀರು' ಎಂದೇ ಪರಿಗಣಿಸಲಾಗಿದೆ. ಕೈಗಾರಿಕಾ ಬಳಕೆಗಾಗಿ ಆ ನೀರಿನ ಮೇಲೆ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತದೆ ಎಂದು ಅಥಾರಿಟಿ ಫಾರ್‌ ಅಡ್ವಾನ್ಸ್‌ ರೂಲಿಂಗ್‌ (ಎಎಆರ್‌) ಹೇಳಿದೆ.

ನಾಗಪುರ ತ್ಯಾಜ್ಯ ನೀರು ನಿರ್ವಹಣಾ ಕಂಪನಿಯು ಮೂರು ಹಂತದಲ್ಲಿ ಶುದ್ಧೀಕರಿಸಿದ ನೀರನ್ನು ಮಹಾರಾಷ್ಟ್ರ ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿಗೆ ಸರಬರಾಜು ಮಾಡಿದೆ. ಹೀಗೆ ಪೂರೈಸಿರುವ ನೀರು ಜಿಎಸ್‌ಟಿ ಕಾನೂನಿನ ಅಡಿಯಲ್ಲಿ ತೆರಿಗೆಗೆ ಒಳಪಡುತ್ತದೆಯೇ ಎಂದು ಕಂಪನಿಯು ಮಹಾರಾಷ್ಟ್ರದ ಎಎಆರ್‌ ಪೀಠದಲ್ಲಿ ಅರ್ಜಿ ಸಲ್ಲಿಸಿತ್ತು.

ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದಲ್ಲಿ ಶುದ್ಧೀಕರಿಸಿದ ನೀರನ್ನು ವಿದ್ಯುತ್‌ ಉತ್ಪಾದನಾ ಕಂಪನಿಗೆ ಪೂರೈಸಲಾಗಿದ್ದು, ಅದು ಕುಡಿಯಲು ಯೋಗ್ಯವಲ್ಲ ಎಂಬುದನ್ನು ಎಎಆರ್‌ ಗಮನಿಸಿದೆ.

ಅರ್ಜಿದಾರರು ಕಲುಷಿತ ನೀರಿನಿಂದ ಕಲ್ಮಶಗಳನ್ನು ತೆಗೆದು, ಶುದ್ಧೀಕರಿಸಿ ಕೈಗಾರಿಕಾ ಬಳಕೆಗೆ ಉಪಯುಕ್ತವಾಗುಂತೆ ಮಾಡಿದ್ದಾರೆ. ಹಾಗಾಗಿ ವಿದ್ಯುತ್‌ ಉತ್ಪಾದನಾ ಕಂಪನಿಗೆ ಪೂರೈಸಿದ್ದ ನೀರಿಗೆ ತೆರಿಗೆ ಅನ್ವಯವಾಗುತ್ತದೆ ಎಂದು ಎಎಆರ್‌ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು