ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಸಾಮ್ನಾ ಪತ್ರಿಕೆಯ ಸಂಪಾದಕರಾಗಿ ಉದ್ಧವ್ ಠಾಕ್ರೆ ಅಧಿಕಾರ ಸ್ವೀಕಾರ

Last Updated 5 ಆಗಸ್ಟ್ 2022, 13:21 IST
ಅಕ್ಷರ ಗಾತ್ರ

ಮುಂಬೈ: ಶಿವಸೇನಾ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರು ಪಕ್ಷದ ಮುಖವಾಣಿಗಳಾದ ‘ಸಾಮ್ನಾ’ ಮತ್ತು ‘ದೊಪಹರ್‌ ಕ ಸಾಮ್ನಾ’ಪತ್ರಿಕೆಗಳ ಸಂಪಾದಕರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.

‘ಸಾಮ್ನಾ’ ಮರಾಠಿ ದೈನಿಕವಾಗಿದ್ದರೆ, ‘ದೊಪಹರ್‌ ಕ ಸಾಮ್ನಾ’ಹಿಂದಿಯ ಟಾಬ್ಲಾಯ್ಡ್ ಆಗಿದೆ. ಉಭಯ ಪತ್ರಿಕೆಗಳ ಇನ್‌ಪ್ರಿಂಟ್‌ನಲ್ಲಿ ಸಂಪಾದಕರು ಎಂದು ಉದ್ಧವ್ ಹೆಸರಿದೆ.

ಈ ಹಿಂದೆ ಸಂಪಾದಕರಾಗಿದ್ದ ಅವರು ಮುಖ್ಯಮಂತ್ರಿಯಾದ ಬಳಿಕ ಆ ಹೊಣೆಯನ್ನು ಪತ್ನಿ ರಶ್ಮಿ ಅವರಿಗೆ ವಹಿಸಿದ್ದರು. ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಸಂಜಯ್‌ ರಾವುತ್ ಅವರನ್ನು ಜಾರಿ ನಿರ್ದೇಶನಾಲಯ ಸದ್ಯ ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT