ಗುರುವಾರ , ಮಾರ್ಚ್ 23, 2023
28 °C
ವಿಪಕ್ಷಗಳು ಬಜೆಟನ್ನು ಅಧ್ಯಯನ ಮಾಡಿ ಅಭಿಪ್ರಾಯ ವ್ಯಕ್ತಪಡಿಸುತ್ತವೆ ಎನ್ನುವ ನಿರೀಕ್ಷೆ ನನ್ನದು ಎಂದ ಪ್ರಧಾನಿ

ಭಾರತ ಮೊದಲು, ಜನ ಮೊದಲು ಎನ್ನುವುದೇ ನಮ್ಮ ಕೆಲಸದ ಸಂಸ್ಕೃತಿ: ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಭಾರತ ಮೊದಲು, ಜನ ಮೊದಲು‘ ಎನ್ನುವುದೇ ನಮ್ಮ ಕೆಲಸದ ಸಂಸ್ಕೃತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 

ಇಲ್ಲಿ ಮಾತನಾಡಿದ ಅವರು, ‘ ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರದ್ದು,  ಒಂದೇ ಧ್ಯೇಯವಾಕ್ಯ, ಒಂದೇ ಗುರಿ.  ನಮ್ಮ ಕೆಲಸದ ಸಂಸ್ಕೃತಿಯು ಭಾರತ ಮೊದಲು ಜನರು ಮೊದಲು ಎನ್ನುವುದಾಗಿದೆ. ಇದೇ ಸ್ಪೂರ್ತಿಯೊಂದಿಗೆ ನಾವು ಬಜೆಟ್‌ ಅಧಿವೇಶನದಲ್ಲೂ ಚರ್ಚೆ ಮಾಡುತ್ತೇವೆ. ಎಲ್ಲಾ ವಿರೋಧ ಪಕ್ಷಗಳು ಬಜೆಟ್‌ ಅನ್ನು ಅಧ್ಯಯನ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತವೆ ಎನ್ನುವ ಅಭಿಲಾಷೆ ನನ್ನದು‘ ಎಂದು ಅವರು ಹೇಳಿದರು.

ದೀರ್ಘಾವಧಿಗೆ ದೇಶಕ್ಕೆ ಉಪಯೋಗವಾಗುವಂತಹ ನೀತಿ ನಿರ್ಣಯ ಚರ್ಚೆಗಳು ಕಲಾಪದಲ್ಲಿ ನಡೆಯಲಿದೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.

ಫೆ. 1 ರಂದು ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಇಂದು (ಜನವರಿ 31) ಲೋಕಸಭೆಯಲ್ಲಿ 2022–23ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು