ಮೋದಿ ಅವಹೇಳನ| ಬಿಲಾವಲ್ ಭುಟ್ಟೊ ತಲೆಗೆ ₹ 2ಕೋಟಿ ಬಹುಮಾನ ಘೋಷಿಸಿದ ಬಿಜೆಪಿ ಮುಖಂಡ

ಬಾಗ್‌ಪತ್, ಉತ್ತರ ಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹೇಳಿಕೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಅವರ ಶಿರಚ್ಛೇದ ಮಾಡಿದವರಿಗೆ ₹ 2 ಕೋಟಿ ಬಹುಮಾನ ನೀಡುವುದಾಗಿ ಉತ್ತರ ಪ್ರದೇಶದ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಶನಿವಾರ ಘೋಷಿಸಿದ್ದಾರೆ.
ಬಿಲಾವಲ್ ಹೇಳಿಕೆ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಬಾಗ್‌ಪತ್ ಜಿಲ್ಲಾ ಪಂಚಾಯ್ತಿಯ ಬಿಜೆಪಿ ಸದಸ್ಯ ಮನುಪಾಲ್ ಬನ್ಸಾಲ್ ಈ ಘೋಷಣೆ ಮಾಡಿದ್ದಾರೆ.
‘ಸಚಿವ ಬಿಲಾವಲ್ ಭುಟ್ಟೊ ಶಿರಚ್ಛೇದ ಮಾಡುವವರು ಯಾರೇ ಆಗಲಿ ಅವರಿಗೆ ನಾನು ₹ 2 ಕೋಟಿ ಬಹುಮಾನ ನೀಡುತ್ತೇನೆ ಎಂದು ಘೋಷಿಸುತ್ತೇನೆ’ ಎಂದು ಬನ್ಸಾಲ್ ಹೇಳಿದ್ದಾರೆ. ಈ ಘೋಷಣೆಗೆ ಮೆಚ್ಚುಗೆ ಸೂಚಿಸಿರುವ ನೆರೆದಿದ್ದ ಗುಂಪು ‘ಮನುಪಾಲ್ ಬನ್ಸಾಲ್ ಜಿಂದಾಬಾದ್’ ಎಂದು ಘೋಷಣೆ ಕೂಗಿದೆ.
ಬಳಿಕ ತಮ್ಮ ಘೋಷಣೆ ಕುರಿತು ಸುದ್ದಿಸಂಸ್ಥೆಯ ಜತೆಗೆ ಮಾತನಾಡಿದ ಬನ್ಸಾಲ್, ‘ನಾನು ಆ ರೀತಿ ಘೋಷಿಸಿರುವುದು ನಿಜ. ನಾವು ಅತ್ಯಂತ ಗೌರವಿಸುವ ನಮ್ಮ ಪ್ರಧಾನಿ ಅವರ ಬಗ್ಗೆ ಯಾರೇ ಆಗಲಿ ಈ ರೀತಿ ಮಾತನಾಡಿದರೆ ಅಂಥ ವ್ಯಕ್ತಿಯನ್ನು ನಾವು ಸಹಿಸಿಕೊಳ್ಳುವುದಿಲ್ಲ. ಪ್ರಧಾನಿ ಅವರೊಂದಿಗೆ ನಮಗೆ ನಿಕಟ ಬಾಂಧವ್ಯವಿದೆ. ಅವರಿಗಾಗಿ ನಾವು ಏನು ಮಾಡಲೂ ಸಿದ್ಧ. ನಮಗೆ ಯಾವುದೇ ತೊಂದರೆಯಾಗದು’ ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.