ಉತ್ತರ ಪ್ರದೇಶ: ನಿಧನರಾದ 13 ದಿನಗಳ ಬಳಿಕ ವೈದ್ಯರಿಗೆ ಬಂತು ವರ್ಗಾವಣೆ ಪತ್ರ

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ವೈದ್ಯರೊಬ್ಬರು ಮೃತಪಟ್ಟು 13 ದಿನ ಕಳೆದ ಬಳಿಕ ಅವರಿಗೆ ವರ್ಗಾವಣೆ ಪತ್ರ ಬಂದಿದೆ.
ಚಿತ್ರಕೂಟದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ದೀಪೇಂದ್ರ ಸಿಂಗ್ (55) ಅವರು ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದರು.
ಚಿಕಿತ್ಸೆಗೆ ಅನುಕೂಲವಾಗಬೇಕೆಂದು ಅವರು ಚಿತ್ರಕೂಟದಿಂದ ಪ್ರಯಾಗ್‌ರಾಜ್‌ಗೆ ವರ್ಗಾವಣೆ ಬಯಸಿದ್ದರು. ಆದರೆ, ಸೂಕ್ತ ಸಮಯಕ್ಕೆ ಸರ್ಕಾರದಿಂದ ಸ್ಪಂದನೆ ಸಿಕ್ಕಿರಲಿಲ್ಲ.
ಚಿಕಿತ್ಸೆಗೆ ಸ್ಪಂದಿಸದೆ ಅವರು ಜೂನ್ 17ರಂದು ಮೃತಪಟ್ಟಿದ್ದರು. ಅದಾದ ನಂತರ ಜೂನ್ 30ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ್ದ ವರ್ಗಾವಣೆ ಪಟ್ಟಿಯಲ್ಲಿ ದೀಪೇಂದ್ರ ಸಿಂಗ್ ಹೆಸರಿತ್ತು.
ದೀಪೇಂದ್ರ ಅವರ ವಾಟ್ಸ್‌ಆ್ಯಪ್‌ಗೆ ವರ್ಗಾವಣೆ ಪತ್ರ ಬಂದಿದೆ. ಆದರೆ, ಅದಾಗಲೇ ಅವರು ಮೃತಪಟ್ಟು 13 ದಿನ ಕಳೆದಿದ್ದು, 13ನೇ ದಿನದ ತಿಥಿ ಕಾರ್ಯ ನಡೆಸುವ ವೇಳೆಗೆ ಅವರ ವರ್ಗಾವಣೆ ಪತ್ರ ತಲುಪಿದೆ.
India Covid Updates: 16,103 ಹೊಸ ಪ್ರಕರಣ, 31 ಸೋಂಕಿತರ ಸಾವು
ವೈದ್ಯ ಸಿಂಗ್ ಅವರು ಸ್ತ್ರೀರೋಗ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.