ಗುರುವಾರ , ಫೆಬ್ರವರಿ 25, 2021
18 °C

ಉತ್ತರಪ್ರದೇಶ: ಪಾಕಿಸ್ತಾನದ ಸಂಖ್ಯೆಯಿಂದ ಬಿಜೆಪಿ ಶಾಸಕಿಗೆ ಜೀವ ಬೆದರಿಕೆ ಸಂದೇಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ಉತ್ತರಪ್ರದೇಶದ ಬಿಜೆಪಿ ಶಾಸಕಿ ಸರಿತಾ ಭದೌರಿಯಾ ಅವರಿಗೆ ಪಾಕಿಸ್ತಾನದ ಸಂಖ್ಯೆಯಿಂದ ವಾಟ್ಸ್‌ಆ್ಯಪ್‌ನಲ್ಲಿ ಜೀವ ಬೆದರಿಕೆಯ ಅನೇಕ ಸಂದೇಶಗಳು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಈ ಸಂದೇಶಗಳಲ್ಲಿ ಪ್ರಧಾನಿ ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರಿಗೂ ಜೀವ ಬೆದರಿಕೆಯನ್ನು ಹಾಕಲಾಗಿದೆ’ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐಯ ಲೋಗೋವನ್ನು ಹೊಂದಿರುವ ವಾಟ್ಸ್‌ಆ್ಯಪ್ ಖಾತೆಯಿಂದ ಜೀವ ಬೆದರಿಕೆಯ ಹಲವು ಸಂದೇಶಗಳು ಬಂದಿವೆ ಎಂದು ಸರಿತಾ ಭದೌರಿಯಾ ಅವರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

‘ಮೊದಲ ಸಂದೇಶ ಶನಿವಾರ ರಾತ್ರಿ 11 ಗಂಟೆಗೆ ಕಳುಹಿಸಲಾಗಿದೆ. ಭಾನುವಾರ ಬೆಳಿಗ್ಗೆಯಷ್ಟರಲ್ಲಿ 8 ಸಂದೇಶಗಳು ಬಂದಿತ್ತು. ಈ ಸಂದೇಶಗಳಲ್ಲಿ ಶಾಸಕಿ ಸರಿತಾ, ಪ್ರಧಾನಿ ಮೋದಿ, ಹಿರಿಯ ಬಿಜೆಪಿ ನಾಯಕರು ಮತ್ತು ಆರ್‌ಎಸ್‌ಎಸ್‌ ನಾಯಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ ವಾಟ್ಸ್‌ಆ್ಯಪ್‌ನಲ್ಲಿ ಈ ಸಂದೇಶಗಳು ಬಂದಿವೆ. ನಾನು ಇದನ್ನು ಪರಿಶೀಲಿಸಿದ್ದೇನೆ. +92 ರಿಂದ ಆರಂಭಗೊಳ್ಳುವ ಪಾಕಿಸ್ತಾನಿ ಮೊಬೈಲ್‌ ಸಂಖ್ಯೆಯಿಂದ ಈ ಸಂದೇಶಗಳು ಬಂದಿವೆ. ಸದ್ಯ ಅವರಿಗೆ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಈ ಸಂಬಂಧ ತನಿಖೆಯನ್ನು ನಡೆಸಲಾಗುತ್ತಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಆಕಾಶ್‌ ಥೋಮರ್‌ ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು