ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಅಕ್ರಮ ಮದ್ಯ ಮಾರಾಟವನ್ನು ಪತ್ತೆ ಹಚ್ಚಲು ಡ್ರೋನ್‌ ಬಳಕೆ

Last Updated 23 ಜೂನ್ 2021, 9:56 IST
ಅಕ್ಷರ ಗಾತ್ರ

ಬಹರಾಯಿಚ್ (ಉತ್ತರ ಪ್ರದೇಶ): ‘ಇಂಡೋ-ನೇಪಾಳ ಗಡಿ ಬಳಿಯಿರುವ ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟದ ಜಾಲವನ್ನು ಪತ್ತೆ ಹಚ್ಚಲು ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುವುದು’ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

‘ನಕಲಿ ಮದ್ಯದ ಕಳ್ಳಸಾಗಣೆ ಮತ್ತು ವ್ಯಾಪಾರವನ್ನು ಪತ್ತೆ ಹಚ್ಚಲು ಸಶಸ್ತ್ರ ಸೀಮಾಬಲ (ಎಸ್‌ಎಸ್‌ಬಿ) ಮತ್ತು ಅಬಕಾರಿ ಇಲಾಖೆಯು ಜಂಟಿ ಕಾರ್ಯಾಚರಣೆ ನಡೆಸಲಿವೆ’ ಎಂದು ಬಹರಾಯಿಚ್ ಜಿಲ್ಲಾಧಿಕಾರಿ ದಿನೇಶ್ ಚಂದ್ರ ಅವರು ಹೇಳಿದರು.

‘ಮಿಹಿನ್‌ಪುರ್ವಾ ಅರಣ್ಯ ಪ್ರದೇಶದಲ್ಲಿ ಅಕ್ರಮ ಮದ್ಯ ಉತ್ಪಾದನೆ ಮತ್ತು ಮಾರಾಟವನ್ನು ಡ್ರೋನ್‌ ಸಹಾಯದಿಂದ ಪತ್ತೆ ಹಚ್ಚಲಾಗುವುದು. ಈ ಸಂಬಂಧ ಪರಿಣಾಮಕಾರಿ ಜಾಲವನ್ನು ಸೃಷ್ಟಿಸುವಂತೆ ಅಬಕಾರಿ ಇಲಾಖೆಯು ನಿರ್ದೇಶನ ನೀಡಿದೆ. ಈ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾದವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT