ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UP Election: ಯೋಗಿಯಿಂದ ಅವಹೇಳನಕಾರಿ ಪದ ಬಳಕೆ– ದೂರು ನೀಡಿದ ಸಮಾಜವಾದಿ ಪಕ್ಷ

Last Updated 4 ಫೆಬ್ರುವರಿ 2022, 6:05 IST
ಅಕ್ಷರ ಗಾತ್ರ

ಲಖನೌ: ಚುನಾವಣಾ ಪ್ರಚಾರದ ಭಾಷಣಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವಹೇಳನಕಾರಿ ಹಾಗೂ ಬೆದರಿಕೆಯೊಡ್ಡುವಂಥ ಭಾಷೆ ಬಳಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷವು (ಎಸ್‌ಪಿ) ಆರೋಪಿಸಿದೆ. ಈ ಕುರಿತು ಭಾರತೀಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಅಂಥ ಭಾಷೆ ಬಳಕೆಯನ್ನು ತಕ್ಷಣವೇ ನಿಷೇಧಿಸಬೇಕು ಎಂದು ಒತ್ತಾಯಿಸಿದೆ.

ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ಎಸ್‌ಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ವಕ್ತಾರ ರಾಜೇಂದ್ರ ಚೌಧರಿ ಪತ್ರ ಬರೆದಿದ್ದು, ಯೋಗಿ ಅವರು ಚುನಾವಣಾ ಭಾಷಣಗಳಲ್ಲಿ ಬಳಸಿರುವ ಕೆಲವು ಪದಗಳನ್ನು ಉಲ್ಲೇಖಿಸಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ ಅಪರಾಧಿಗಳು ‘ಬುಲ್ಡೋಜರ್’ ಎದುರಿಸಬೇಕಾಗಬಹುದು ಎಂದು ಯೋಗಿ ಎಚ್ಚರಿಕೆ ನೀಡಿದ್ದರು.

ಯೋಗಿ ಅವರು ತಮ್ಮ ಪಕ್ಷದ ಸದಸ್ಯರ ವಿರುದ್ಧ ನಿರಂತರವಾಗಿ ‘ಗೂಂಡಾಗಳು’, ‘ಮಾಫಿಯಾ’ ಪದಗಳನ್ನು ಬಳಸುತ್ತಿದ್ದಾರೆ ಎಂದು ಎಸ್‌ಪಿ ದೂರಿದೆ. ಅಲ್ಲದೆ, ಅಂಥ ಕೆಲವು ಪದಗಳನ್ನು ಪತ್ರದಲ್ಲಿ ಉಲ್ಲೇಖಿಸಿದೆ.

‘ಆಗ್ರಾದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ, ಮಾರ್ಚ್ 10ರ ಬಳಿಕ ‘ಬುಲ್ಡೋಜರ್’ ಕೆಲಸ ಮಾಡಲಿದೆ ಎಂದು ಹೇಳಿದ್ದರು. ಪದೇಪದೇ ಎಸ್‌ಪಿ ನಾಯಕರನ್ನು ಗೂಂಡಾ, ಮಾವಲಿ, ಮಾಫಿಯಾ ಎಂದು ಹೇಳುತ್ತಿದ್ದಾರೆ. ಫೆಬ್ರುವರಿ 1ರಂದು ಮೀರತ್‌ನ ಸೈವಾಲ್‌ಖಾಸ್‌ನಲ್ಲಿ ಹಾಗೂ ಕಿಥೋರ್‌ನಲ್ಲಿ ‘ಕೆಂಪು ಟೋಪಿ ಎಂದರೆ ಗಲಭೆಕೋರರು, ಅಪರಾಧ ಹಿನ್ನಲೆಯುಳ್ಳವರು’ ಎಂದು ಹೇಳಿದ್ದರು. ಕೈರಾನಾದಲ್ಲಿ ಮಾತನಾಡಿ, ಈಗ ಕಾಣಿಸುವ ಬಿಸಿ ಕರಗಲಿದೆ, ಅದನ್ನು ಹೇಗೆ ಕರಗಿಸಬೇಕು ಎಂಬುದು ಗೊತ್ತಿದೆ ಎಂದು ಹೇಳಿದ್ದರು. ಸದಾ ಬೆದರಿಕೆ ಒಡ್ಡುವಂಥ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ’ ಎಂದು ಚೌಧರಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT