ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UPSC ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: ಶುಭಂ, ಜಾಗೃತಿ, ಅಂಕಿತಾ ಟಾಪರ್ಸ್‌

Last Updated 24 ಸೆಪ್ಟೆಂಬರ್ 2021, 19:33 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ದ 2020ನೇ ಸಾಲಿನ ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ.

ಎಂಜಿನಿಯರಿಂಗ್‌ ಪದವೀಧರರಾದ ಶುಭಂ ಕುಮಾರ್‌, ಜಾಗೃತಿ ಅವಸ್ಥಿ ಹಾಗೂ ಅಂಕಿತಾ ಜೈನ್‌ ಅವರು ಕ್ರಮವಾಗಿ ಮೊದಲ ಮೂರು ರ್‍ಯಾಂಕ್‌ಗಳನ್ನು ಪಡೆದಿದ್ದಾರೆ.

ಬಾಂಬೆ ಐಐಟಿಯಿಂದ ಸಿವಿಲ್‌ ಎಂಜಿನಿಯರಿಂಗ್‌ ಪದವಿ ಪಡೆದಿರುವ ಶುಭಂ ಐಚ್ಛಿಕ ವಿಷಯವನ್ನಾಗಿ ಮಾನವಶಾಸ್ತ್ರವನ್ನೂ, ಭೋಪಾಲದ ಮೌಲಾನಾ ಆಝಾದ್‌ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಿಂದ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿರುವ ಜಾಗೃತಿ, ಸಮಾಜಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು.

545 ಪುರುಷರು ಮತ್ತು 216 ಮಹಿಳೆಯರು ಸೇರಿದಂತೆ ಒಟ್ಟು 761 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ವಿವಿಧ ನಾಗರಿಕ ಸೇವೆಗಳಿಗೆ ಸೇರ್ಪಡೆ ಆಗಲಿದ್ದಾರೆ.

ಐಎಎಸ್‌, ಐಎಫ್‌ಎಸ್‌, ಐಪಿಎಸ್‌ ಅಧಿಕಾರಿ ಹುದ್ದೆ ಸೇರಿದಂತೆ ಇತರ ಹುದ್ದೆಗಳ ನೇಮಕಾತಿಗಾಗಿ 2020ರ ಅಕ್ಟೋಬರ್‌ 4ರಂದು ನಡೆದಿದ್ದ ಪ್ರಿಲಿಮ್ಸ್‌ ಪರೀಕ್ಷೆಯಲ್ಲಿ 4,82,770 ಅಭ್ಯರ್ಥಿಗಳು ಹಾಜರಾಗಿದ್ದರು.

ಇವರಲ್ಲಿ 10,564 ಅಭ್ಯರ್ಥಿಗಳು 2021ರ ಜನವರಿಯಲ್ಲಿ ನಡೆದಿದ್ದ ಮುಖ್ಯ ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದಿದ್ದರು. ಈ ಪೈಕಿ 2,053 ಅಭ್ಯರ್ಥಿಗಳು ಮೌಖಿಕ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಅಭ್ಯರ್ಥಿಗಳು ಪಡೆದ ಅಂಕಗಳ ಪಟ್ಟಿಯನ್ನು 15 ದಿನಗಳೊಳಗೆ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಯುಪಿಎಸ್‌ಸಿ ಪ್ರಕಟಣೆ ತಿಳಿಸಿದೆ.

ರ್‍ಯಾಂಕ್ ಪಡೆದ ಕರ್ನಾಟಕದ ಆಭ್ಯರ್ಥಿಗಳು

ಅಕ್ಷಯ್‌ ಸಿಂಹ ಕೆ.ಜೆ - 77

ನಿ‌ಶ್ಚಯ್‌ ಪ್ರಸಾದ್‌ ಎಂ - 130

ಸಿರಿವೆನ್ನೆಲ–204

ಅನಿರುದ್ದ್‌ ಆರ್‌ ಗಂಗಾವರಂ- 252

ಸೂರಜ್‌ ಡಿ - 255

ನೇತ್ರಾ ಮೇಟಿ– -326

ಮೇಘಾ ಜೈನ್‌– 354

ಪ್ರಜ್ವಲ್– 367

ಸಾಗರ್‌ ಎ ವಾಡಿ – 385

ನಾಗರಗೊಜೆ ಶುಭಂ – 453

ಬಿಂದು ಮಣಿ ಆರ್‌. ಎನ್‌- 468

ಶಕೀರ್‌ ಅಹ್ಮದ್‌ ತೊಂಡಿಖಾನ್‌ – 583

ಪ್ರಮೋದ್ ಆರಾಧ್ಯ ಎಚ್‌. ಆರ್‌-601

ಸೌರಬ್‌ ಕೆ– - 725

ವೈಶಾಖ್‌ ಬಗೀ– 744‌

ಸಂತೋಶ ಎಚ್‌ – 751

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT