ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜತೆ ಸಂಬಂಧ ಗಟ್ಟಿಗೊಳಿಸಿ ಚೀನಾಕ್ಕೆ ತಿರುಗೇಟು ನೀಡಬೇಕು: ಅಮೆರಿಕ ಮಸೂದೆ

ಇಬ್ಬರು ಸೆನೆಟ್‌ ಸದಸ್ಯರಿಂದ ಮಸೂಚೆ ಮಂಡನೆ
Last Updated 9 ಏಪ್ರಿಲ್ 2021, 7:24 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತದೊಂದಿಗೆ ದ್ವಿ‍ಪಕ್ಷೀಯ ಸಂಬಂಧ ಗಟ್ಟಿಗೊಳಿಸುವ ಮೂಲಕ ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಪ್ರತಿಪಾದಿಸಿರುವ ಇಬ್ಬರು ಸೆನೆಟ್‌ ಸದಸ್ಯರು, ಈ ಸಂಬಂಧ ಮಸೂದೆಯೊಂದನ್ನು ಮಂಡಿಸಿದ್ದಾರೆ.

ಸೆನೆಟರ್‌ಗಳಾದ ರಾಬರ್ಟ್‌ ಮೆನೆಂಡೇಜ್‌ ಹಾಗೂ ಜಿಮ್‌ ರಿಷ್ ಅವರು ‘ಸ್ಟ್ರಾಟೆಜಿಕ್ ಕಾಂಪಿಟಿಷನ್‌ ಆ್ಯಕ್ಟ್‌–2021’ ಎಂಬ ಮಸೂದೆಯನ್ನು ಮಂಡಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯ ವೃದ್ಧಿಸಲು ಹವಣಿಸುತ್ತಿರುವ ಚೀನಾಕ್ಕೆ ಎದಿರೇಟು ನೀಡುವ ಸಲುವಾಗಿ ರಚಿಸಿರುವ ‘ಕ್ವಾಡ್‌’ ಕೂಟವನ್ನು ಈ ಮಸೂದೆ ದೃಢೀಕರಿಸುತ್ತದೆ. ಜೊತೆಗೆ, ಇತರ ಪ್ರಾದೇಶಿಕ ಮಿತ್ರರಾಷ್ಟ್ರಗಳೊಂದಿಗಿನ ಸಂಬಂಧವನ್ನು ಮತ್ತಷ್ಟೂ ಗಟ್ಟಿಗೊಳಿಸಬೇಕು ಎಂದೂ ಪ್ರತಿಪಾದಿಸುತ್ತದೆ.

ವಿದೇಶಾಂಗ ನೀತಿಗೆ ಸಂಬಂಧಿಸಿದ ಸೆನೆಟ್‌ ಕಮಿಟಿ ಏ.14ರಂದು ಈ ಮಸೂದೆ ಕುರಿತು ಚರ್ಚೆ ನಡೆಸಿ, ಅನುಮೋದನೆ ನೀಡುವ ಸಾಧ್ಯತೆ ಇದೆ. ನಂತರ, ಮಸೂದೆಯನ್ನು ಸೆನೆಟ್‌ನಲ್ಲಿ ಮಂಡಿಸಲಾಗುತ್ತದೆ.

‘ಜಗತ್ತು ಕೋವಿಡ್‌–19 ವಿರುದ್ಧ ಹೋರಾಡುತ್ತಿರುವ ಸಂದರ್ಭವನ್ನೇ ಬಳಸಿಕೊಳ್ಳುತ್ತಿರುವ ಚೀನಾ, ದಕ್ಷಿಣ ಚೀನಾ ಸಮುದ್ರ ಪ್ರದೇಶ, ಹಾಂಗ್‌ಕಾಂಗ್‌ನಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದೆ. ಚೀನಾದ ಈ ನಡೆಯಿಂದ ಭಾರತದ ಗಡಿಯಲ್ಲಿ ಸಹ ಸಂಘರ್ಷ ಏರ್ಪಟ್ಟಿತ್ತು’ ಎಂದು ಈ ಮಸೂದೆಯಲ್ಲಿ ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT