ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ದೇವರೆಂದು ಆರಾಧಿಸುತ್ತಿದ್ದ ತೆಲಂಗಾಣದ ಅಭಿಮಾನಿ ಹೃದಯಾಘಾತದಿಂದ ನಿಧನ

Last Updated 12 ಅಕ್ಟೋಬರ್ 2020, 14:22 IST
ಅಕ್ಷರ ಗಾತ್ರ

ಹೈದರಾಬಾದ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಕಳೆದ ನಾಲ್ಕು ವರ್ಷಗಳಿಂದ ದೇವರಂತೆ ಆರಾಧಿಸುತ್ತಿದ್ದ ಇಲ್ಲಿನ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಭಾನುವಾರ ಮೃತಪಟ್ಟಿದ್ದಾರೆ.

ತೆಲಂಗಾಣದ ಜನಗಾಂ ಜಿಲ್ಲೆಯ ಕೊನ್ನೆ ಗ್ರಾಮದ ರೈತ ಬುಸ್ಸಾ ಕೃಷ್ಣ (33) ಮೃತಪಟ್ಟವರು.

‘ಕಳೆದ ಭಾನುವಾರ ಮನೆಯಲ್ಲಿ ಟೀ ಕುಡಿಯುವಾಗ ಕುಸಿದು ಬಿದ್ದರು. ಆಸ್ಪತ್ರೆಗೆ ಅವರನ್ನು ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ’ ಎಂದು ಅವರು ಸಂಬಂಧಿ ಸಂಜಯ್‌ ಕುಮಾರ್‌ ಪಿಟಿಐಗೆ ಮಾಹಿತಿ ನೀಡಿದ್ದಾರೆ.

‘ಟ್ರಂಪ್‌್ ದಂಪತಿಗೆ ಕೊರೊನಾ ಸೋಂಕು ತಗುಲಿದ್ದ ಸುದ್ದಿ ಕೇಳಿ ಬೇಸರ ಪಟ್ಟುಕೊಂಡಿದ್ದ ಕೃಷ್ಣ ಅವರು, ಕೆಲಸಗಳಿಂದ ವಿಮುಖರಾಗಿದ್ದರು. ಯಾರ ಜೊತೆಯೂ ಸೇರುತ್ತಿರಲಿಲ್ಲ. ತಮ್ಮ ಕೋಣೆಯಲ್ಲಿ ಒಬ್ಬರೇ ಅಳುತ್ತಿದ್ದರು. ದಿನಕ್ಕೆ ಒಂದು ಹೊತ್ತಷ್ಟೇ ಊಟ ಮಾಡುತ್ತಿದ್ದರು. ‘ದೇವರಿಗೆ’ ಕೋವಿಡ್‌ ಬಂದಿದೆ ಎಂದು ದುಃಖ ವ್ಯಕ್ತಪಡಿಸುತ್ತಿದ್ದರು. ಸೋಂಕಿನಿಂದ ಚೇತರಿಸಿಕೊಳ್ಳುವಂತೆ ಟ್ರಂಪ್‌ ಫೋಟೊ ಮುಂದೆ ಮಾತನಾಡುತ್ತಿದ್ದರು’ ಎಂದು ಹೇಳಿದ್ದಾರೆ.

‘2019ರ ಜೂನ್‌ 14ರಂದು ತಮ್ಮ ಮನೆಯಲ್ಲಿ 6 ಅಡಿಗಳ ಟ್ರಂಪ್‌ ಪ್ರತಿಮೆಯನ್ನು ಸ್ಥಾಪಿಸಿದ್ದರಲ್ಲದೇ ನಿತ್ಯ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು.ಟ್ರಂಪ್‌ ಅವರಂತೆಯೇ ಕೇಶ ವಿನ್ಯಾಸ ಮಾಡಿಕೊಂಡಿದ್ದ ಅವರು, ಜೀವನದಲ್ಲಿ ಒಮ್ಮೆಯಾದರೂ ಟ್ರಂಪ್‌ ಅವರನ್ನು ಭೇಟಿ ಆಗುವ ವಿಶ್ವಾಸವನ್ನು ಹೊಂದಿದ್ದರು. ಅವರ ಕನಸು ಈಡೇರಲಿಲ್ಲ. ಅವರೊಬ್ಬ ಎಲ್ಲರನ್ನು ಪ್ರೀತಿಸುವ ಹೃದಯವಂತ’ ಎಂದು ಸಂಜಯ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT