ಶನಿವಾರ, ನವೆಂಬರ್ 28, 2020
25 °C

ಉತ್ತರ ಪ್ರದೇಶ: ಬೆಂಕಿ ಹಚ್ಚಿಕೊಂಡಿದ್ದ ಅತ್ಯಾಚಾರ ಸಂತ್ರಸ್ತೆ ಸಾವು, ಮೂವರ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬುಲಂದ್‌ಶಹರ್‌ (ಉತ್ತರ ಪ್ರದೇಶ): ಆರೋಪಿಯ ಸಂಬಂಧಿಕರ ಕಿರುಕುಳ ತಾಳಲಾರದೆ ಬೆಂಕಿ ಹಚ್ಚಿಕೊಂಡಿದ್ದ ಅತ್ಯಾಚಾರ ಸಂತ್ರಸ್ತೆಯು ದೆಹಲಿಯ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.   

ಮಾವಿನ ತೋಟ ಕಾಯಲು ಗ್ರಾಮಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಮಹಿಳೆಯು ಆಗಸ್ಟ್‌ 15ರಂದು ದೂರು ನೀಡಿದ್ದರು. ಆರೋಪಿಯನ್ನು ಅಂದೇ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಅಂದಿನಿಂದಲೂ ಆರೋಪಿಯ ಸಂಬಂಧಿಕರು ದೂರು ಹಿಂತೆಗೆದುಕೊಳ್ಳುವಂತೆ ಸಂತ್ರಸ್ತೆಗೆ ಪೀಡಿಸುತ್ತಿದ್ದರು.  ಇದರಿಂದ ಬೇಸತ್ತ ಸಂತ್ರಸ್ತೆ  ಮಂಗಳವಾರ ಮುಂಜಾನೆ ಬೆಂಕಿ ಹಚ್ಚಿಕೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ಇದನ್ನೂ ಓದಿ: 

‘ಸಂತ್ರಸ್ತೆಯ ತಂದೆ ನೀಡಿರುವ ಲಿಖಿತ ದೂರಿನ ಆಧಾರದಲ್ಲಿ ಮೂವರನ್ನು ಬಂಧಿಸಲಾಗಿದೆ. ಕರ್ತವ್ಯ ಲೋಪಕ್ಕಾಗಿ ಸಬ್‌ ಇನ್‌ಸ್ಪೆಕ್ಟರ್‌ ವಿನಯಕಾಂತ್‌ ಗೌತಮ್‌ ಮತ್ತು ಪೇದೆ ವಿಕ್ರಾಂತ್‌ ತೋಮರ್‌ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸಂತೋಷ್‌ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.    

‘ಜಹಾಂಗೀರಾಬಾದ್‌ ಪೊಲೀಸ್ ಠಾಣೆಯ ವಿವೇಕ್‌ ಶರ್ಮಾ, ಅನೂಪ್‌ಶಹರ್‌ನ‌ ಅತುಲ್‌ ಕುಮಾರ್‌ ಚೌಭೆ ಮತ್ತು ಇನ್‌ಸ್ಪೆಕ್ಟರ್‌ ಸುಭಾಷ್‌ ಸಿಂಗ್‌ ಅವರನ್ನು ಪ್ರಕರಣದ ತನಿಖೆಗೆ ನಿಯೋಜಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು