ಬುಧವಾರ, ಜೂನ್ 29, 2022
26 °C

ಕೋವಿಡ್ ಪ್ರಕರಣಗಳು ಇಳಿಕೆ; ರಾತ್ರಿ ಕರ್ಫ್ಯೂ ನಿರ್ಬಂಧ ತೆಗೆದುಹಾಕಿದ ಉತ್ತರಪ್ರದೇಶ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಲಖನೌ: ಕೋವಿಡ್–19 ಹೊಸ ಪ್ರಕರಣಗಳು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ನಿರ್ಬಂಧವನ್ನು ಉತ್ತರ ಪ್ರದೇಶ ಸರ್ಕಾರ ತೆಗೆದುಹಾಕಿದೆ.

ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 842 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ವರದಿಯಾದ ಕೋವಿಡ್ ಪ್ರಕರಣಗಳ ಸಂಖ್ಯೆ 20,63,9041 ತಲುಪಿದೆ. ಸಕ್ರಿಯ ಪ್ರಕರಣಗಳ ಪ್ರಮಾಣ ವಾರದಿಂದ ಈಚೆಗೆ ಗಣನೀಯವಾಗಿ ಇಳಿಕೆಯಾಗಿದ್ದು, ಇನ್ನು ‌ಕೇವಲ 8,683 ಪ್ರಕರಣಗಳಷ್ಟೇ ಬಾಕಿ ಇವೆ.

ದೇಶದಲ್ಲಿಯೂ ಹೊಸ ಪ್ರಕರಣಗಳ ಪ್ರಮಾಣ ಕುಸಿದಿದೆ. ಶನಿವಾರ ಹೊಸದಾಗಿ 22,270 ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ 325 ಸೋಂಕಿತರು ಮೃತಪಟ್ಟಿದ್ದು, 60,298 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದುವರೆಗೆ ವರದಿಯಾದ ಸೋಂಕು ಪ್ರಕರಣಗಳ ಸಂಖ್ಯೆ 4,28,02,505 ಆಗಿದ್ದು, ಸಾವಿನ ಸಂಖ್ಯೆ 5,11,230ಕ್ಕೆ ತಲುಪಿದೆ. ಸಕ್ರಿಯೆ ಪ್ರಕರಣಗಳ ಸಂಖ್ಯೆ 2,53,739ಗೆ ಇಳಿದಿದೆ ಎಂದೂ ಮಾಹಿತಿ ನೀಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು