ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್ ಫೈಟರ್‌ ಜೆಟ್‌ನ ಮೊದಲ ಮಹಿಳಾ ಪೈಲಟ್‌ ಶಿವಾಂಗಿ ಸಿಂಗ್ 

Last Updated 25 ಸೆಪ್ಟೆಂಬರ್ 2020, 5:36 IST
ಅಕ್ಷರ ಗಾತ್ರ

ನವದೆಹಲಿ: ರಫೇಲ್ ಯುದ್ಧ ವಿಮಾನ ಚಲಾಯಿಸುವ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ವಾರಣಾಸಿಯ ಫೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್. ಸೆಪ್ಟೆಂಬರ್ 10ರಂದು ಇವರು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ನೇಮಕಗೊಂಡಿದ್ದರು.

ಶಿವಾಂಗಿ ಅಂಬಾಲದಲ್ಲಿ ರಫೇಲ್ ವಿಮಾನವನ್ನು ಹಾರಿಸುವ ತರಬೇತಿ ಪಡೆಯುತ್ತಿದ್ದಾರೆ.ಶೀಘ್ರವೇ ಇವರು ಅಂಬಾಲದ ಗೋಲ್ಡನ್ ಆ್ಯರೋಸ್ ವಾಯುನೆಲೆಯಲ್ಲಿರುವ 17 ಸ್ಕ್ವಾಡ್ರನ್‌ನ ರಫೇಲ್ ಯುದ್ಧ ವಿಮಾನಗಳನ್ನು ಚಲಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ವಾಯುಸೇನೆಯಲ್ಲಿರುವ10 ಮಹಿಳಾ ಫೈಟರ್ ಪೈಲಟ್‌ಗಳಲ್ಲಿ ಒಬ್ಬರಾಗಿರುವ ಶಿವಾಂಗಿ 2017ರಲ್ಲಿ ವಾಯುಸೇನೆಗೆ ಸೇರಿದ್ದರು. ವಾಯುಸೇನೆಗೆ ಸೇರಿದ ನಂತರ ಅವರು ಮಿಗ್- 21 ಬೈಸನ್ ವಿಮಾನವನ್ನು ಚಲಾಯಿಸುತ್ತಿದ್ದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದ ಸಿಂಗ್, ರಾಜಸ್ಥಾನದ ವಾಯುನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಜತೆಗೆ ಇವರು ಕೆಲಸ ಮಾಡಿದ್ದಾರೆ.

'ಇದು ನಮಗೆ ಹೆಮ್ಮೆಯ ವಿಷಯ. ಆಕೆಯ ಪರಿಶ್ರಮದ ಫಲ ಇದು. ನಾವು ಆಕೆಗೆ ಬೆಂಬಲ ನೀಡಿದ್ದೆವು. ನಮಗೆ ತುಂಬಾ ಖುಷಿಯಾಗಿದೆ' ಎಂದು ಶಿವಾಂಗಿ ಅವರ ಅಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ವಾಯುಪಡೆಯಲ್ಲಿ ಸದ್ಯ 1,875 ಮಹಿಳಾ ಅಧಿಕಾರಿಗಳಿದ್ದಾರೆ. ಈ ಪೈಕಿ 10 ಫೈಟರ್ ಪೈಲಟ್‌ಗಳು ಮತ್ತು 18 ಮಂದಿ ನಾವಿಗೇಟರ್‌ಗಳು ಇದ್ದಾರೆ. ಮಹಿಳಾ ಫೈಟರ್ ಪೈಲಟ್‌ಗಳನ್ನು ಐಎಎಫ್‌ನಲ್ಲಿ ಕಾರ್ಯತಂತ್ರ ಮತ್ತು ಕಾರ್ಯಾಚರಣೆಯ ಅವಶ್ಯಕತೆಗಳಿಗೆ ಅನುಗುಣವಾಗಿ ನಿಯೋಜಿಸಲಾಗಿದೆ ಮತ್ತು ಇದನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತದೆ ಎಂದು ರಕ್ಷಣಾ ಸಚಿವಾಲಯದ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಇತ್ತೀಚೆಗೆ ಸಂಸತ್ತಿನಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT