ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರನಟನ ಹೊಳಪಿಗೆ ಪುಟವಿಟ್ಟ ಶಿಲ್ಪಿ ಇನ್ನಿಲ್ಲ

Last Updated 9 ಅಕ್ಟೋಬರ್ 2020, 16:01 IST
ಅಕ್ಷರ ಗಾತ್ರ

ಬೆಂಗಳೂರು:'ಹುಲಿಯ ಹಾಲಿನ‌ ಮೇವು', 'ಮಯೂರ', 'ಶ್ರೀನಿವಾಸ ಕಲ್ಯಾಣ', ‘ಗಂಧದ ಗುಡಿ’, ‘ನಾ ನಿನ್ನ ಮರೆಯಲಾರೆ', 'ಕೌ ಬಾಯ್ ಕುಳ್ಳ‘, ‘ಸನಾದಿ ಅಪ್ಪಣ್ಣ', 'ಮೋಜುಗಾರ ಸೊಗಸುಗಾರ' ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಹಿರಿಯನಿರ್ದೇಶಕವಿಜಯರೆಡ್ಡಿ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಮೂಲತಃ ಆಂಧ್ರಪ್ರದೇಶದವರಾದವಿಜಯರೆಡ್ಡಿ, ಕನ್ನಡವಷ್ಟೇ ಅಲ್ಲದೆ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳ ಭಾಷೆಗಳಲ್ಲೂ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ವರನಟ ಡಾ.ರಾಜ್‌ಕುಮಾರ್‌ ಅವರಂತಹ ಪ್ರತಿಭೆಯ ಹೊಳಪಿಗೆ ಪುಟವಿಟ್ಟ ಶಿಲ್ಪಿಗಳ ಪೈಕಿ ಪ್ರಮುಖರೂ ಹೌದು.ರಾಜ್‌ ನಟನೆಯ ಒಂಭತ್ತು ಚಿತ್ರಗಳನ್ನು ನಿರ್ದೇಶಿದ ಕೀರ್ತಿ ರೆಡ್ಡಿಯವರದ್ದು. ಅದರಲ್ಲೂ ಸತತ ಏಳು ಚಿತ್ರಗಳನ್ನು ರಾಜ್‌ಕುಮಾರ್‌ಗಾಗಿ ನಿರ್ದೇಶಿಸಿದ್ದರು.‘ಸನಾದಿ ಅಪ್ಪಣ್ಣ’ ಸಿನಿಮಾ ಇಡೀ ಭಾರತೀಯಚಿತ್ರರಂಗದಲ್ಲೇ ಅದ್ಭುತ ಚಿತ್ರವೆನ್ನುವ ಹೆಸರು ಪಡೆದಿದೆ. ಕನ್ನಡ, ಹಿಂದಿ, ತೆಲುಗು ಭಾಷೆಗಳಲ್ಲಿ 75 ಚಿತ್ರಗಳನ್ನು ಹಾಗೂ ಕನ್ನಡದಲ್ಲೇ 48 ಸಿನಿಮಾಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಇವರದು.

‘ರಂಗ ಮಹಲ್ ರಹಸ್ಯ’ ಚಿತ್ರ ನಿರ್ದೇಶನದ ನಂತರ ಬಹು ಬೇಡಿಕೆಯ ನಿರ್ದೇಶಕರಾಗಿ ಇವರು ಹೊರಹೊಮ್ಮಿದರು. ಆ ಸಿನಿಮಾದ ನಂತರರಾಜ್‌ಕುಮಾರ್‌, ವಿಷ್ಣುವರ್ಧನ್, ಅಂಬರೀಷ್‌, ಅನಂತನಾಗ್‌, ಶಂಕರ್ ನಾಗ್, ಶ್ರೀನಾಥ್, ದ್ವಾರಕೀಶ್, ಶಿವರಾಜಕುಮಾರ್ ಚಿತ್ರಗಳನ್ನುರೆಡ್ಡಿನಿರ್ದೇಶಿಸಿದ್ದಾರೆ.

ಪಾರ್ಶ್ವವಾಯುವಿನಿಂದ ನಡೆದಾಡುವ ಶಕ್ತಿ ಕಳೆದುಕೊಂಡಿದ್ದರು. 2019ರ ಜುಲೈನಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ 72ನೇ ‘ಬೆಳ್ಳಿಹೆಜ್ಜೆ’ ಕಾರ್ಯಕ್ರಮಕ್ಕೆ ಅತಿಥಿಯಾಗಿದ್ದ ಅವರನ್ನು ವ್ಹೀಲ್‌ಚೇರ್‌ನಲ್ಲಿ ಬಂದಿದ್ದರು.

ಐತಿಹಾಸಿಕ ಮತ್ತುಪೌರಾಣಿಕ ಕಥೆಗಳ ಸಿನಿಮಾಗಳನ್ನು ಕಟ್ಟಿಕೊಡುವ ಮೂಲಕವಿಜಯರೆಡ್ಡಿ, ಕನ್ನಡ ಚಿತ್ರರಂಗ ಶ್ರೀಮಂತಗೊಳಿಸಲು ಕೊಡುಗೆ ನೀಡಿದ್ದರು.ಅವರ ಯೌವ್ವನದ ದಿನಗಳನ್ನು ಸಿನಿಮಾಕ್ಕೆ ಧಾರೆಯೆರೆದು, ಸಿನಿಮಾ ರಂಗ ಕಟ್ಟಿ ಬೆಳೆಸುವಲ್ಲಿ ನೆರವಾಗಿದ್ದಾರೆ.ರಾಜ್‌ಮತ್ತುರೆಡ್ಡಿಜೋಡಿಯು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅನನ್ಯವಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT