ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ವಾರ್ಡ್‌ನಲ್ಲಿ ಎಬಿವಿಪಿ ಸದಸ್ಯರು; ಚರ್ಚೆಗೆ ಗ್ರಾಸವಾಯ್ತು ವಿಡಿಯೊ

Last Updated 30 ಏಪ್ರಿಲ್ 2021, 7:42 IST
ಅಕ್ಷರ ಗಾತ್ರ

ಡೆಹ್ರಾಡೂನ್‌: ಆಸ್ಪತ್ರೆಯೊಂದರ ಕೋವಿಡ್‌ ವಾರ್ಡ್‌ ಒಳಗೆ ರೋಗಿಗಳಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಸದಸ್ಯರು ಹಣ್ಣಿನ ಜ್ಯೂಸ್‌ ನೀಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಡೂನ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕೋವಿಡ್‌ ವಾರ್ಡ್‌ ಒಳಗೆ ಪಿಪಿಇ ಕಿಟ್‌ ಧರಿಸಿ ಎಬಿವಿಪಿ ಸದಸ್ಯರು ರೋಗಿಗಳಿಗೆ ಆರೈಕೆ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

'ಆಸ್ಪತ್ರೆಯ ಆಡಳಿತ ಕಾರ್ಯಾಚರಣೆಗಳಲ್ಲಿ ಸಹಕಾರ ನೀಡಲು ಎಬಿವಿಪಿ ಅನುಮತಿ ಪಡೆದಿದೆ, ಆದರೆ ಕೋವಿಡ್‌ ವಾರ್ಡ್‌ ಒಳಗೆ ಪ್ರವೇಶಿಸಲು ಅನುಮತಿ ನೀಡಿಲ್ಲ' ಎಂದು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಅಶುತೋಶ್‌ ಸಯಾನಾ ಹೇಳಿದ್ದಾರೆ.

ಎಬಿವಿಪಿ ಸ್ಟಿಕ್ಕರ್‌ ಇರುವ ಪಿಪಿಇ ಕಿಟ್‌ಗಳನ್ನು ಧರಿಸಿರುವವರು ಕೋವಿಡ್‌ ವಾರ್ಡ್‌ಗಳಲ್ಲಿ ರೋಗಿಗಳ ಆಕ್ಸಿಜನ್‌ ಪೈಪ್‌ಗಳನ್ನು ತೆಗೆದು, ಅವರಿಗೆ ಜ್ಯೂಸ್‌ ಇರುವ ಲೋಟಗಳನ್ನು ನೀಡುತ್ತಿರುವುದನ್ನು ವಿಡಿಯೊ ಹಾಗೂ ಚಿತ್ರಗಳಲ್ಲಿ ಕಾಣಬಹುದಾಗಿದೆ.

ಕೊರೊನಾ ವೈರಸ್‌ ಮಾರ್ಗಸೂಚಿಗಳ ಪ್ರಕಾರ, ಕಾರ್ಯಾಚರಣೆಯಲ್ಲಿರುವ ಆರೋಗ್ಯ ಸಿಬ್ಬಂದಿ ಹೊರತು ಪಡಿಸಿ ಬೇರೆ ಯಾರೊಬ್ಬರಿಗೂ ಕೋವಿಡ್‌ ವಾರ್ಡ್‌ಗೆ ಪ್ರವೇಶಿಸಲು ಅವಕಾಶ ಇರುವುದಿಲ್ಲ.

ಎಬಿವಿಪಿ ಸದಸ್ಯರು ಕೋವಿಡ್‌ ವಾರ್ಡ್‌ಗೆ ಪ್ರವೇಶಿಸಿರುವುದರ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಅಶುತೋಶ್‌ ತಿಳಿಸಿದ್ದಾರೆ.

ಈ ವಿಚಾರ ಹೊರ ಬರುತ್ತಿದ್ದಂತೆ ಎಬಿವಿಪಿ ಕಾರ್ಯಕರ್ತರು ಆಸ್ಪತ್ರೆಯ ಆವರಣ ಪ್ರವೇಶಿಸುವುದನ್ನು ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಕ ಕೆ.ಸಿ.ಪಂತ್‌ ನಿಷೇಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT