ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಎಕ್ಸ್‌ಇ ತಳಿ ತಡೆಗೆ ಮಾಸ್ಕ್‌ ಬಳಕೆ ಕಡ್ಡಾಯ: ತಜ್ಞರು

Last Updated 12 ಏಪ್ರಿಲ್ 2022, 14:34 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ರೂಪಾಂತರಿ ಹೊಸ ತಳಿ ‘ಎಕ್ಸ್‌ಇ ’ಯಿಂದ ರಕ್ಷಣೆ ಪಡೆಯಲು ದೇಶದಲ್ಲಿ ಎಲ್ಲರೂ ಸ್ವಇಚ್ಛೆಯಿಂದ ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು ಒಳಿತು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದು, ಇದು ಕೋವಿಡ್‌ನ ಎಲ್ಲಾ ಮಾದರಿಯ ರೂಪಾಂತರಿಗಳ ವಿರುದ್ಧ ಅತಂತ್ಯ ಪರಿಣಾಮಕಾರಿ ಅಸ್ತ್ರ ಎಂದಿದ್ದಾರೆ.

ಓಮೈಕ್ರಾನ್‌ನ ತಳಿಗಳಾದ ಬಿಎ.1 ಮತ್ತು ಬಿಎ.2ನ ಮರು ಸಂಯೋಜಿತ ಹೈಬ್ರಿಡ್‌ ಆಗಿರುವ ಎಕ್ಸ್‌ಇ ತಳಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‌ಒ) ಈಗಾಗಲೇ ಎಚ್ಚರಿಕೆ ನೀಡಿದೆ. ಇದನ್ನು ತಡೆಗಟ್ಟಬೇಕಾದರೆ ಓಮೈಕ್ರಾನ್‌ ಸೋಂಕು ತಡೆಗೆ ಕೈಗೊಂಡಿದ್ದ ಕ್ರಮಗಳನ್ನು ಮುಂದುವರಿಸಬೇಕು. ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಕಡ್ಡಾಯವಾಗಿ ಮಾಸ್ಕ್‌ ಬಳಕೆ ಮಾಡುವುದನ್ನು ಪ್ರೋತ್ಸಾಹಿಸಬೇಕು ಎಂದು ಪಬ್ಲಿಕ್‌ ಹೆಲ್ತ್‌ ಫೌಂಡೇಶನ್‌ನ ಮುಖ್ಯಸ್ಥ ಪ್ರೊ.ಗಿರಿಧರ್‌ ಆರ್‌.ಬಾಬು ಮತ್ತು ಇತರೆ ವೈದ್ಯರು ಸಲಹೆ ನೀಡಿದ್ದಾರೆ. ಮಾಸ್ಕ್‌ ಧರಿಸುವುದರಿಂದ ಕೋವಿಡ್‌ ನಿಯಂತ್ರಣ ಮಾತ್ರವಲ್ಲದೆ ಹಲವುಉಪಯೋಗಗಳು ಇವೆ ಎಂದಿದ್ದಾರೆ.

ಫೆಬ್ರುವರಿಯಲ್ಲಿ ಓಮೈಕ್ರಾನ್‌ ಸೋಂಕು ಇಳಿಮುಖದ ಬಳಿಕದ ಹೊಸ ತಳಿಯ ಬಗ್ಗೆ ಆತಂಕ ಶುರು ಆದ ಸಂದರ್ಭದಲ್ಲೂ ತಜ್ಞರು ವೈರಸ್‌ನಿಂದ ರಕ್ಷಣೆ ಪಡೆಯಲು ಕಡ್ಡಾಯ ಮಾಸ್ಕ್ ಧರಿಸಬೇಕೆಂದು ಸಲಹೆ ನೀಡಿದ್ದರು.

ಕಳೆದ ವಾರ ಮುಂಬೈ ಮತ್ತುಗುಜರಾತ್‌ನಲ್ಲಿ ಎಕ್ಸ್‌ಇ ರೂಪಾಂತರಿ ತಳಿಯ ಸೋಂಕು ದೃಢಪಟ್ಟಿತ್ತು. ಎರಡು ವರ್ಷಗಳ ಬಳಿಕ ಕಡ್ಡಾಯ ಮಾಸ್ಕ್‌ ಧರಿಸುವಿಕೆ ನಿಯಮವನ್ನು ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ತೆರವುಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT