ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲ್‌ ದಾಳಿಯ ಬಗ್ಗೆ ಛತ್ತೀಸಗಡ ಸಿಎಂ ಕನಸು ಕಂಡಿದ್ದರೇ?: ಕಾಂಗ್ರೆಸ್‌ ಪ್ರಶ್ನೆ

Last Updated 4 ಏಪ್ರಿಲ್ 2021, 14:17 IST
ಅಕ್ಷರ ಗಾತ್ರ

ನವದೆಹಲಿ:ಛತ್ತೀಸಗಡದಲ್ಲಿ ನಕ್ಸಲ್‌ ದಾಳಿ ನಡೆದಿದೆ. ಆದಾಗ್ಯೂ ಆ ರಾಜ್ಯದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರುಅಸ್ಸಾಂನಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದು ಅಸ್ಸಾಂನ ಬಿಜೆಪಿಸಂಸದ ದಿಲೀಪ್‌ ಸೈಕಿಯಾ ಅವರು ವಾಗ್ದಾಳಿ ನಡೆಸಿದ್ದರು.ಇದಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿದ್ದು, ಮುಖ್ಯಮಂತ್ರಿಗಳು ಈ ದುರಂತದ ಬಗ್ಗೆ ಕನಸು ಕಂಡಿದ್ದರೇ ಎಂದು ಪ್ರಶ್ನಿಸಿದೆ.

ಕಾಂಗ್ರೆಸ್‌ ಹಿರಿಯ ನಾಯಕ ಅಶ್ವಿನಿ ಕುಮಾರ್‌ ಅವರು ನಕ್ಸಲ್‌ ದಾಳಿ ವೇಳೆ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ನಕ್ಸಲರಿಂದ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ದೇಶವು ಎಚ್ಚೆತ್ತುಕೊಳ್ಳಬೇಕಾದ ಸಮಯ ಇದಾಗಿದೆ ಎಂದಿದ್ದಾರೆ. ಛತ್ತೀಸಗಡದ ಸುಕ್ಮಾ-ಬಿಜಾಪುರದಲ್ಲಿ ನಕ್ಸಲರು ನಡೆಸಿದ ದಾಳಿವೇಳೆ 22 ಮಂದಿ ರಕ್ಷಣಾ ಸಿಬ್ಬಂದಿ ಮೃತಪಟ್ಟಿದ್ದರು.

ʼಇದು ದುರದೃಷ್ಟಕರ. ಬಿಜೆಪಿಯು ಎಲ್ಲವನ್ನೂ ತಿರುಚುವುದನ್ನು ರೂಢಿಸಿಕೊಂಡಿದೆ.ಛತ್ತೀಸಗಡದಮುಖ್ಯಮಂತ್ರಿಯು ತಮ್ಮ ರಾಜ್ಯದಲ್ಲಿ ಇಂತಹ ಘಟನೆ ನಡೆಯಲಿದೆ ಎಂಬ ಕನಸು ಕಂಡಿದ್ದರೇ?ಅವರು ಛತ್ತೀಸಗಡಕ್ಕೆ ಸಮರ್ಥ ನಾಯಕತ್ವವನ್ನು ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ.ಇಂತಹ ಪರಿಸ್ಥಿತಿಯಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿಯ ಮೇಲೆ ಆರೋಪ ಹೊರಿಸುವುದು ಸೂಕ್ತವಲ್ಲʼ ಎಂದು ಕುಮಾರ್‌ ಹೇಳಿದ್ದಾರೆ.

ಕಳೆದಹಲವು ವರ್ಷಗಳಿಂದ ಸುಕ್ಮಾ-ಬಿಜಾಪುರದಲ್ಲಿ ನಕ್ಸಲ್‌ ಚಟುವಟಿಕೆಗಳು ಹೆಚ್ಚಾಗಿವೆ ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ʼದೇಶದ ಈ ಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದ ನಕ್ಸಲ್‌ ಚಟುವಟಿಕೆಗಳು ಹೆಚ್ಚಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ ಮತ್ತು ದುರಂತ.ರಾಜ್ಯದ ಆಡಳಿತವು ನಕ್ಸಲರಿಂದ ಹೆಚ್ಚುತ್ತಿರುವ ಹಿಂಸಾಚಾರವನ್ನು ತಡೆಯಲು ಸಮರ್ಥ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಸಮಯ ಇದಾಗಿದೆ ಎಂದು ನಾನು ಭಾವಿಸುತ್ತೇನೆʼ ಎಂದಿದ್ದಾರೆ.

ಮುಂದುವರಿದು,ʼಇದುಪಕ್ಷಪಾತ ಮಾಡುವ ವಿಚಾರವಲ್ಲ. ಆದರೆ, ಇಡೀ ರಾಷ್ಟ್ರದ ಮತ್ತು ಪ್ರಜಾಪ್ರಭುತ್ವದ ಮುಖ್ಯ ವಿಚಾರವಾಗಿದೆ. ನಕ್ಸಲ್ ಭಯೋತ್ಪಾದನೆಯ ವಿರುದ್ಧ ರಾಜ್ಯವು ಒಗ್ಗಟ್ಟಿನಿಂದ ಹೋರಾಡುವ ಸಮಯವಿದುʼ ಎಂದು ಕರೆ ನೀಡಿದ್ದಾರೆ.

ಬಘೇಲ್‌ ಅವರು ಚುನಾವಣೆ ನಡೆಯಲಿರುವ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಪರ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣೆ ನಿಮಿತ್ತ ಅವರನ್ನು ಅಸ್ಸಾಂನಲ್ಲಿ ಪಕ್ಷದ ವೀಕ್ಷರನ್ನಾಗಿಯೂ ಕಾಂಗ್ರೆಸ್‌ ನೇಮಿಸಿದೆ.

ʼಛತ್ತೀಸಗಡದ ಸುಕ್ಮಾ-ಬಿಜಾಪುರದಲ್ಲಿ ನಕ್ಸಲರು ನಡೆಸಿದ ದಾಳಿವೇಳೆ 22 ಮಂದಿ ರಕ್ಷಣಾ ಸಿಬ್ಬಂದಿ ಮೃತಪಟ್ಟಿದ್ದಾರೆ. 31 ಜನರು ಗಾಯಗೊಂಡಿದ್ದಾರೆʼ ಎಂದು ಬಿಜಾಪುರದ ಪೊಲೀಸ್‌ ಸೂಪರಿಂಟೆಂಡೆಂಟ್‌ ಕಾಮಲೋಚನ್‌ ಕಶ್ಯಪ್‌ ಶನಿವಾರ ತಿಳಿಸಿದ್ದರು.

ಈ ಸಂಬಂಧಬಘೇಲ್‌ ಅವರನ್ನು ಟೀಕಿಸಿದ್ದ ದಿಲೀಪ್‌ ಸೈಕಿಯಾ, ʼಹಲವು ರಕ್ಷಣಾ ಸಿಬ್ಬಂದಿ ಜೀವ ಕಳೆದುಕೊಂಡಿರುವ ಸಮಯದಲ್ಲಿ ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅವರು ಇಲ್ಲಿ ತಮ್ಮ ಸರ್ಕಾರದ ಅಧಿಕಾರಿಗಳೊಂದಿಗೆ ಠಿಕಾಣಿ ಹೂಡಿದ್ದಾರೆ ಮತ್ತು ಆಡಳಿತ ವ್ಯವಸ್ಥೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಚುನಾವಣಾ ಆಯೋಗವು ಈ ವಿಚಾರವಾಗಿ ತನಿಖೆ ನಡೆಸಬೇಕುʼ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT