ಶುಕ್ರವಾರ, ಜುಲೈ 1, 2022
27 °C

ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ: ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ಹೊತ್ತಿಕೊಳ್ಳುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿದ್ದು, ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ತನಿಖೆಗೆ ಆದೇಶಿಸಿದೆ.

ತನಿಖೆ ನಡೆಸಲು ಮತ್ತು ಪರಿಹಾರ ಕ್ರಮ ಸೂಚಿಸಲು ಸಚಿವಾಲಯ ಡಿಆರ್‌ಡಿಒ ಪ್ರಯೋಗಾಲಯಗಳ ಎಸ್‌ಎಎಂ (ಸಿಸ್ಟಂ ಅನಾಲಿಸಿಸ್‌ ಮತ್ತು ಮಾಡೆಲಿಂಗ್‌) ಕ್ಲಸ್ಟರ್‌ ಅಡಿ ಬರುವ ಸ್ಫೋಟಕ ಮತ್ತು ಪರಿಸರ ಸುರಕ್ಷತೆ ಕೇಂದ್ರಕ್ಕೆ (ಸಿಎಫ್‌ಇಇಎಸ್‌) ಪತ್ರ ಬರೆದಿದೆ.

ಎಲೆಕ್ಟ್ರಿಕ್‌ ವಾಹನಗಳ ಸುಧಾರಣೆಗೆ ಪರಿಹಾರ ಕ್ರಮಗಳ ಜೊತೆಗೆ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಸೂಚಿಸುವಂತೆ ಪತ್ರದಲ್ಲಿ ತಿಳಿಸಿದೆ.

‘ಬೆಂಕಿ ಹತ್ತಿಕೊಳ್ಳಲು ಹೊರಗಿನ ಪರಿಸರ ಅಥವಾ ವಾಹನಗಳ ವಿನ್ಯಾಸದಲ್ಲಿ ಲೋಪಗಳಿವೆಯೇ ಎಂಬುದನ್ನು ತಿಳಿಯಲು ಸಚಿವಾಲಯ ಮುಂದಾಗಿದೆ. ತನಿಖಾ ತಂಡಗಳು ಪುಣೆ, ಬೆಂಗಳೂರು (ಓಲಾ ಪ್ರಧಾನ ಕಚೇರಿ) ಮತ್ತು ತಮಿಳುನಾಡಿನ ವೆಲ್ಲೂರಿಗೆ ಭೇಟಿ ನೀಡಲಿವೆ’ ಎಂದು ಸಚಿವಾಯಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು