ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾಳದಲ್ಲಿ ಮೋದಿ 'ವಿಕಾಸ್' ಮತ್ತು ಮಮತಾ 'ವಿನಾಶ'ದ ನಡುವೆ ಸ್ಪರ್ಧೆ: ಅಮಿತ್ ಶಾ

Last Updated 11 ಫೆಬ್ರುವರಿ 2021, 9:46 IST
ಅಕ್ಷರ ಗಾತ್ರ

ಕೋಲ್ಕತ್ತ: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ಅವರ 'ವಿಕಾಸ್' (ಅಭಿವೃದ್ಧಿ) ಮಾದರಿ ಮತ್ತು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ 'ವಿನಾಶ ಮಾದರಿ' ನಡುವಣ ಸ್ಪರ್ಧೆಯಾಗಿರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿಕೆ ನೀಡಿದ್ದಾರೆ.

ಮಾತು ಮುಂದುವರಿಸಿದ ಅವರು, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರವು ಸಂಪೂರ್ಣ ವೈಫಲ್ಯವನ್ನು ಕಂಡಿದೆ ಎಂದು ವಾಗ್ದಾಳಿ ನಡೆಸಿದರು.

ಮುಂಬರುವ ವಿಧಾನಸಭಾ ಚುನಾವಣೆಯು ನರೇಂದ್ರ ಮೋದಿ ಸರ್ಕಾರದ ವಿಕಾಸ್ (ಅಭಿವೃದ್ಧಿ) ಮಾದರಿ ಹಾಗೂ ಮಮತಾ ಬ್ಯಾನರ್ಜಿ ಅವರ ವಿನಾಶ ಮಾದರಿಯ ನಡುವಣ ಸ್ಪರ್ಧೆಯಾಗಿರಲಿದೆ. ಮೋದಿ ಸರ್ಕಾರವು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದರೆ ಮಮತಾ ಬ್ಯಾನರ್ಜಿ, ಸೋದರಳಿಯ ಕಲ್ಯಾಣಕ್ಕಾಗಿ ಚಿಂತಿಸುತ್ತಾರೆ ಎಂದು ಭ್ರಷ್ಟಾಚಾರದ ವಿರುದ್ಧ ಆರೋಪ ಮಾಡಿದರು.

ಬಂಗಾಳದಲ್ಲಿ ಪರಿವರ್ತನ ಯಾತ್ರೆಯಲ್ಲಿ ಭಾಗವಹಿಸುತ್ತಾ ಪ್ರತಿಕ್ರಿಯಿಸಿರುವ ಅಮಿತ್ ಶಾ, ಮುಂಬರುವ ಚುನಾವಣೆಯಲ್ಲಿ ಕೇವಲ ಮುಖ್ಯಮಂತ್ರಿ, ಶಾಸಕ ಅಥವಾ ಸಚಿವರನ್ನು ಬದಲಾಯಿಸುವುದು ಮಾತ್ರವಲ್ಲ. ಒಳ ನುಸುಳುವಿಕೆ ಹಾಗೂ ಬಂಗಾಳದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಲಿದೆ ಎಂದು ಹೇಳಿದರು.

ಬಂಗಾಳದಲ್ಲಿ ಬಿಜೆಪಿಗಾಗಿ ನೀವು ಮತ ಹಾಕಿದರೆ, ಅಕ್ರಮ ವಲಸಿಗರನ್ನು ಬಿಡಿ, ಗಡಿಯುದ್ಧಕ್ಕೂ ಒಂದು ಪಕ್ಷಿಯನ್ನು ಸಹ ರಾಜ್ಯಕ್ಕೆ ಪ್ರವೇಶಿಸಲು ಬಿಡಲಾರೆವು ಎಂದು ಹೇಳಿದರು.

ಬಿಜೆಪಿ ಕಾರ್ಯಕರ್ತರ ರಾಜಕೀಯ ಹತ್ಯೆಯನ್ನು ಖಂಡಿಸಿರುವ ಅಮಿತ್ ಶಾ, ಆರೋಪಿಗಳನ್ನು ಜೈಲಿಗೆ ಕಳುಹಿಸಿಲಾಗುವುದು ಎಂದು ಎಚ್ಚರಿಸಿದರು. ಅಲ್ಲದೆ ಟಿಎಂಸಿ ಗೂಂಡಾಗಳನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದು ಹೇಳಿದರು.

ಟಿಎಂಸಿ ಗೂಂಡಾಗಳಿಂದ ಬಿಜೆಪಿ ಕಾರ್ಯಕರ್ತರು ಭಯಭೀತಿಗೊಳ್ಳಲಿದ್ದಾರೆ ಎಂದು ನೀವು ಭಾವಿಸುವೀರಾ? ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಕಾರಣವಾದ ಪ್ರತಿಯೊಬ್ಬ ಆರೋಪಿಯನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದರು .

'ಜೈ ಶ್ರೀರಾಮ್' ಘೋಷಣೆ ಮೊಳಗಿದಾಗ ಮಮತಾ ಬ್ಯಾನರ್ಜಿ ಕೋಪಗೊಳ್ಳುತ್ತಾರೆ. ಆದರೆ ವಿಧಾನಸಭಾ ಚುನಾವಣೆ ಮುಗಿಯುವ ಹೊತ್ತಿಗೆ ಸ್ವತಃ ಮಮತಾ ಅವರೇ ಜೈಶ್ರೀರಾಮ್ ಜಪಿಸಲು ಆರಂಭಿಸುತ್ತಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT