ಮಂಗಳವಾರ, ಆಗಸ್ಟ್ 3, 2021
20 °C

ಪ.ಬಂಗಾಳದಲ್ಲಿ ಹಿಂಸಾಚಾರದ ರಾಜಕೀಯಕ್ಕೆ ಮೇ 2ರಂದು ಕೊನೆ: ವಿಜಯವರ್ಗೀಯ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಸಿಲ್‌ಗುರಿ: ಹಿಂಸಾಚಾರವು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಕೊನೆಯ ಅಸ್ತ್ರವಾಗಿದ್ದು, ಮೇ 2ರಂದು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದ ರಾಜಕೀಯ ಕೊನೆಗೊಳ್ಳಲಿದೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಬಂಗಾಳದ ಉಸ್ತುವಾರಿ ಕೈಲಾಶ್ ವಿಜಯವರ್ಗೀಯ ಸೋಮವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, 'ಹಿಂಸಾಚಾರವು ಟಿಎಂಸಿಯ ಕೊನೆಯ ಅಸ್ತ್ರವಾಗಿದೆ. ಬಂಗಾಳ ಇತಿಹಾಸದಲ್ಲೇ ಇದು ಕೊನೆಯ ಹಿಂಸಾಚಾರವಾಗಲಿದ್ದು, ಮೇ 2ರ ನಂತರ ರಾಜ್ಯದ ಹಿಂಸಾಚಾರ ರಾಜಕೀಯವು ಕೊನೆಗೊಳ್ಳಲಿದೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ: 

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಹಂತದಲ್ಲಿ 30 ಸ್ಥಾನಗಳ ಪೈಕಿ 26ರಲ್ಲಿ ಗೆಲುವು ದಾಖಲಿಸಲಿದೆ ಎಂಬ ಬಿಜೆಪಿ ನಾಯಕ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯವರ್ಗೀಯ, ಪಕ್ಷವು ಎಲ್ಲ ಸ್ಥಾನಗಳನ್ನು ಗೆದ್ದರೆ ಆಶ್ಚರ್ಯಪಡಬೇಕಿಲ್ಲ ಎಂದು ಹೇಳಿದ್ದಾರೆ.

'ನಾವು ಎಲ್ಲ 30 ಸ್ಥಾನಗಳನ್ನು ಗೆದ್ದರೆ ಅಚ್ಚರಿಯಿಲ್ಲ. ಟಿಎಂಸಿ ಬೂತ್‌ಗಳನ್ನು ವಶಕ್ಕೆ ಪಡೆದು ನಕಲಿ ಮತದಾನ ಮಾಡುವುದನ್ನು ತಡೆಯಲಾಗಿದೆ. ಮತದಾರರು ತಮ್ಮ ಇಚ್ಚೆಯಂತೆ ಮತದಾನ ಚಲಾಯಿಸಿದ್ದಾರೆ. ಜನ ಬೆಂಬಲ ಬಿಜೆಪಿಗೆ ಸಿಗಲಿದ್ದು, ಗೂಂಡಾಗಳಿಗೆ ಯಶಸ್ಸು ಸಿಗುವುದಿಲ್ಲ' ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು