ಮಂಗಳವಾರ, ಮೇ 11, 2021
27 °C

ಪಶ್ಚಿಮ ಬಂಗಾಳ: ಕಿಂಗ್ ಮೇಕರ್ ಆಗುವ ವಿಶ್ವಾಸದಲ್ಲಿ ಕಾಂಗ್ರೆಸ್ – ಎಡಪಕ್ಷ ಮೈತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಟಿಎಂಸಿ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿಗೆ ಸಾಕ್ಷಿಯಾಗಿರುವ ಪಶ್ಚಿಮ ಬಂಗಾಳದಲ್ಲಿ, ಕಾಂಗ್ರೆಸ್–ಎಡಪಕ್ಷ–ಐಎಸ್‌ಎಫ್ ಮೈತ್ರಿಕೂಟವು ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟದಲ್ಲಿದೆ. ಒಂದು ವೇಳೆ ಅತಂತ್ರ ವಿಧಾನಸಭೆ ಏರ್ಪಟ್ಟಲ್ಲಿ ಕಿಂಗ್ ಮೇಕರ್ ಆಗುವ ವಿಶ್ವಾಸದಲ್ಲಿ ಮೈತ್ರಿಕೂಟ ಇದೆ.

ಸ್ವಾತಂತ್ರ್ಯಾ ನಂತರ ಆರು ದಶಕಗಳ ಕಾಲ ಆಡಳಿತ ನಡೆಸಿದ ಬಳಿಕ ಬಂಗಾಳದ ರಾಜಕೀಯದಲ್ಲಿ ಮೂಲೆಗುಂಪಾಗಿದ್ದ ಕಾಂಗ್ರೆಸ್ ಮತ್ತು ಸಿಪಿಎಂ ನೇತೃತ್ವದ ಎಡರಂಗವು, 2016ರ ವಿಧಾನಸಭಾ ಚುನಾವಣೆಯ ನಂತರ ಎರಡನೇ ಬಾರಿಗೆ ಒಗ್ಗೂಡಿದೆ.

ಅಬ್ಬಾಸ್ ಸಿದ್ದಿಕಿ ಅವರ ಹೊಸ ವೇದಿಕೆ, ಭಾರತೀಯ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಈ ಮೈತ್ರಿಕೂಟದ ಮೂರನೇ ಪಾಲುದಾರ ಪಕ್ಷವಾಗಿದೆ. ‘ಸಂಯುಕ್ತ ಮೋರ್ಚಾ’ ಹೆಸರಿನಲ್ಲಿ ಒಂದಾಗಿರುವ ಪಕ್ಷಗಳು, ಟಿಎಂಸಿ ಹಾಗೂ ಬಿಜೆಪಿಯ ಮತಗಳನ್ನು ವಿಭಜಿಸಿ ಗೆಲ್ಲುವ ಲೆಕ್ಕಾಚಾರದಲ್ಲಿವೆ.

ಇಷ್ಟು ವರ್ಷಗಳ ಕಾಲ ಪ್ರಬಲ ಪ್ರತಿಪಕ್ಷದ ಅನುಪಸ್ಥಿತಿಯಲ್ಲಿ, ವಿರೋಧಿ ಮತಗಳನ್ನು ಬಿಜೆಪಿ ಬುಟ್ಟಿಗೆ ಹಾಕಿಕೊಳ್ಳುತ್ತಿತ್ತು. ಸಿದ್ದಿಕಿ ಅವರ ಸೇರ್ಪಡೆಯಿಂದ ಬಂಗಾಳದಲ್ಲಿ ಅಲ್ಪಸಂಖ್ಯಾತ ಮತಗಳ ಪಾಲನ್ನು ಪಡೆಯುವ ವಿಶ್ವಾಸದಲ್ಲಿ ಮೋರ್ಚಾ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು