ಶನಿವಾರ, ನವೆಂಬರ್ 28, 2020
17 °C

ಪ.ಬಂಗಾಳ: ಪಟಾಕಿ ಸುಡುವವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಜಿಪಿಎಸ್ ಆಧಾರಿತ ಸಾಧನ

ಪಿಟಿಐ Updated:

ಅಕ್ಷರ ಗಾತ್ರ : | |

Firecrackers

ಕೊಲ್ಕತ್ತಾ: ಕಾಳಿ ಪೂಜೆಯ ವೇಳೆ ಪಟಾಕಿ ಸುಡುವ ಮೂಲಕ 'ಪಟಾಕಿ ನಿಷೇಧ ಕಾನೂನು' ಉಲ್ಲಂಘಿಸುವವರನ್ನು  ಪತ್ತೆ ಹಚ್ಚಲು ಜಿಪಿಎಸ್ ಆಧಾರಿತ ಸೌಂಡ್ ಮಾನಿಟರಿಂಗ್ ಸಾಧನವನ್ನು ಪೊಲೀಸರಿಗೆ ನೀಡಲಾಗಿದೆ.

ಪಶ್ಚಿಮ ಬಂಗಾಳ ಮಾಲಿನ್ಯ ನಿಯಂತ್ರಣ ಮಂಡಳಿಯು 1,000ಕ್ಕಿಂತಲೂ ಹೆಚ್ಚು ಸಾಧನಗಳನ್ನು ವಿವಿಧ ಪೊಲೀಸ್  ಠಾಣೆಗಳಿಗೆ ವಿತರಿಸಿದೆ.

ಕಾಳಿ ಪೂಜೆ ಮತ್ತು ಇತರ ಹಬ್ಬಗಳ ಆಚರಣೆ ವೇಳೆ ಪಟಾಕಿ ಮಾರಾಟ ಮತ್ತು ಪಟಾಕಿ ಸುಡುವುದನ್ನು ಕೊಲ್ಕತ್ತಾ ಹೈಕೋರ್ಟ್ ನಿಷೇಧಿಸಿದೆ. ಪಟಾಕಿ ಸುಡುತ್ತಿರುವ ಜಾಗ,ದಿನಾಂಕ ಮತ್ತು ಸಮಯವನ್ನು ಈ ಸಾಧನ ಪತ್ತೆ ಹಚ್ಚುವುದಲ್ಲದೆ ಪಟಾಕಿ ಸದ್ದಿನ ಪ್ರಮಾಣವನ್ನೂ ಇದು ಅಳೆಯುತ್ತದೆ. ಈ ಸಾಧನಕ್ಕೆ  ಪ್ರಿಂಟರ್  ಕನೆಕ್ಟ್ ಮಾಡಿದರೆ ಮುದ್ರಿತ ಪ್ರತಿಯನ್ನೂ ತೆಗೆದುಕೊಳ್ಳಬಹುದು ಎಂದು  ಡಬ್ಲ್ಯುಬಿಪಿಸಿಬಿ ಅಧ್ಯಕ್ಷ ಕಲ್ಯಾಣ  ರುದ್ರ ಹೇಳಿದ್ದಾರೆ.

ಈ ಸಾಧನವನ್ನು ಬಳಸುವ ರೀತಿ ಹೇಗೆ ಎಂಬುದನ್ನು ನಾವು  ಪೊಲೀಸರಿಗೆ ಹೇಳಿ ಕೊಟ್ಟಿದ್ದೇವೆ. ಡಬ್ಲ್ಯುಬಿಪಿಸಿಬಿ ತಂಡವು ಸ್ಥಳೀಯ ಪೊಲೀಸರಿಗೆ ಸಹಾಯ ಮಾಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಿಪಿಎಸ್ ಆಧಾರಿತ  ಈ ಸಾಧನವನ್ನು ರಾಜ್ಯದ ಐಟಿ ವಿಭಾಗ ನಿರ್ಮಿಸಿದ್ದು ಕಳೆದ ವರ್ಷವೇ ಇದರ ಬಳಕೆ  ಆರಂಭವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು