ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈಗೆ ಬಂದಿಳಿದ ತಿಮಿಂಗಿಲ ಆಕಾರದ ಬೃಹತ್ ವಿಮಾನ

Last Updated 24 ನವೆಂಬರ್ 2022, 2:15 IST
ಅಕ್ಷರ ಗಾತ್ರ

ಮುಂಬೈ: ತಿಮಿಂಗಿಲ ಆಕಾರದ ಏರ್‌ಬಸ್ ಬೆಲುಗಾ ಸೂಪರ್ ಟ್ರಾನ್ಸ್‌ಪೋರ್ಟರ್ ವಿಮಾನ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ (ಸಿಎಎಸ್‌ಎಂಐಎ) ನಿಲ್ದಾಣಕ್ಕೆ ಬಂದಿಳಿಯಿತು.

ಇದೇ ಮೊದಲ ಬಾರಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್‌ಬಸ್ ಬೆಲುಗಾ ಸೂಪರ್ ಟ್ರಾನ್ಸ್‌ಪೋರ್ಟರ್ ವಿಮಾನ ಬಂದಿಳಿದಿದೆ. ವಿಮಾನದ ವಿಶಿಷ್ಟ ಆಕಾರವು ನೆರೆದಿದ್ದ ಪ್ರಯಾಣಿಕರ ಕಣ್ಮಣವನ್ನು ಸೆಳೆಯಿತು.

ಈ ವಿಮಾನವು ಮುಂಭಾಗದಲ್ಲಿ ಬೆಲುಗಾ ತಿಮಿಂಗಿಲದ ಮೂತಿಯ ಆಕಾರವನ್ನು ಹೊಂದಿದ್ದು, ವಿಶ್ವದ ಅತಿದೊಡ್ಡ ಸರಕು ವಿಮಾನಗಳಲ್ಲಿ ಒಂದಾಗಿದೆ. ಮಂಗಳವಾರ ಮುಂಬೈಯಲ್ಲಿ ಭೂಸ್ಪರ್ಶ ಮಾಡಿದೆ ಎಂದು ಸಿಎಸ್‌ಎಂಐಎ ಟ್ವೀಟ್ ಮೂಲಕ ತಿಳಿಸಿದೆ.

ಬಾಹ್ಯಾಕಾಶ, ಮಿಲಿಟರಿ, ಏರೋನಾಟಿಕ್ಸ್, ಸಮುದ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರಕು ಸಾಗಣೆಗೆ ಏರ್‌ಬಸ್ ಬೆಲುಗಾ ನೆರವಾಗುತ್ತದೆ.

ಏರ್‌ಬಸ್ ಪ್ರಕಾರ ಈ ವಿಮಾನವು 56 ಮೀಟರ್ ಉದ್ದ ಮತ್ತು 45 ಮೀಟರ್ ಅಗಲವನ್ನು ಹೊಂದಿದೆ.

ನವೆಂಬರ್ 20ರಂದು ಏರ್‌ಬಸ್ ಬೆಲುಗಾ ಸೂಪರ್ ಟ್ರಾನ್ಸ್‌ಪೋರ್ಟರ್ ವಿಮಾನ ಕೋಲ್ಕತ್ತ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT