ಸೋಮವಾರ, ಅಕ್ಟೋಬರ್ 18, 2021
27 °C
ಉತ್ತರ ಪ್ರದೇಶದಲ್ಲಿ ಘಟನೆ

ಹೆಂಡತಿಗೆ ತಲಾಖ್ ನೀಡಿದ್ದಲ್ಲದೇ ಅಶ್ಲೀಲ ವಿಡಿಯೊ ಮಾಡಿ ಎಫ್‌ಬಿಗೆ ಹರಿಬಿಟ್ಟ ಭೂಪ!

ಪಿಟಿಐ Updated:

ಅಕ್ಷರ ಗಾತ್ರ : | |

ಮುಜಾಫರ್‌ನಗರ: ತನ್ನ ಗಂಡನೇ ನನ್ನ ಅಶ್ಲೀಲ ವಿಡಿಯೊ ಮಾಡಿ ಫೇಸ್‌ಬುಕ್‌ನಲ್ಲಿ ಹರಿದಾಡಿಸಿದ್ದಾನೆ ಎಂದು ಮನನೊಂದ 25 ವರ್ಷದ ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಜಾಫರ್‌ನಗರ ಜಿಲ್ಲೆಯ ಕೃಷ್ಣನಗರ ಎಂಬಲ್ಲಿ ಶನಿವಾರ ನಡೆದಿರುವುದು ವರದಿಯಾಗಿದೆ.

‘ಈ ದಂಪತಿ ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. 18 ತಿಂಗಳ ಮಗು ಇದೆ‘ ಎಂದು ಪೊಲೀಸ್ ಅಧಿಕಾರಿ ದೀಪಕ್ ಚತುರ್ವೇದಿ ತಿಳಿಸಿದ್ದಾರೆ.

‘ಆರೋಪಿ ಮಹಿಳೆಗೆ ಕಳೆದ ಮೂರು ತಿಂಗಳ ಹಿಂದೆ ತ್ರಿವಳಿ ತಲಾಖ್ ನೀಡುವ ಮೂಲಕ ವಿಚ್ಚೇದನ ನೀಡಿದ್ದನು. ಅದಾಗ್ಯೂ ಮಹಿಳೆಗೆ ಕಿರುಕುಳ ನೀಡುವುದನ್ನು ಮುಂದುವರೆಸಿದ್ದ ಆರೋಪಿ, ಅವಳ ಅಶ್ಲೀಲ ವಿಡಿಯೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನು. ಇದರಿಂದ ನೊಂದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ‘ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮುಜಾಫರ್‌ನಗರದ ಭೋಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಡಿದ ಗಂಡನ ನೆನಪಿಗಾಗಿ ದೇವಸ್ಥಾನ ಕಟ್ಟಿದ ಮಹಿಳೆಯಿಂದ ನಿತ್ಯ ಪೂಜೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು