ನವದೆಹಲಿ:36 ವರ್ಷದ ಮಹಿಳೆ ತನ್ನ ಪತಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ, ಬಳಿಕ ಮಾಹಿತಿಯನ್ನು ಫೇಸ್ಬುಕ್ಗೆ ಪೋಸ್ಟ್ ಮಾಡಿ, ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ದೆಹಲಿಯ ಛತ್ತರ್ ಪುರ್ ಪ್ರದೇಶದ ಅಪಾರ್ಟ್ಮೆಂಟ್ ಒಂದರಲ್ಲಿ ಶನಿವಾರ ನಡೆದಿದೆ.

ಸೋಮವಾರ ಈ ಬಗ್ಗೆ ಮಾಹಿತಿ ಖಚಿತಪಡಿಸಿರುವ ದೆಹಲಿ ಪೊಲೀಸರು, ನೆರೆಮನೆಯವರು ಮತ್ತು ಅಪಾರ್ಟ್ ಮೆಂಟ್ ಮಾಲೀಕನ ಫೋನ್ ಕರೆ ಬಳಿಕ ಅಪಾರ್ಟ್ ಮೆಂಟ್ ಬಾಗಿಲನ್ನು ಒಡೆದು ತೆಗೆದಾಗ ಭೀಕರ ಘಟನೆ ಬೆಳಕಿಗೆ ಬಂದಿದೆ.

ಪತಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ಫೇಸ್ಬುಕ್ ಮೂಲಕ ಮಾಹಿತಿ ಕಲೆ ಹಾಕಿದ್ದ ನೆರೆಮನೆಯವರು ಪೊಲೀಸ್ ಕಂಟ್ರೋಲ್ ರೂಮ್ಗೆ ಈ ಬಗ್ಗೆ ಮಾಹಿತಿ ನೀಡಿ, ಬಳಿಕ ಅಪಾರ್ಟ್ ಮೆಂಟ್ ಮಾಲೀಕರಿಗೂ ಕರೆ ಮಾಡಿದ್ದರು.

ಪೊಲೀಸರು ಸ್ಥಳಕ್ಕೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಅಪಾರ್ಟ್ ಮೆಂಟ್ನ ನೆಲ ಮತ್ತು ಗೋಡೆ ಮೇಲೆ ರಕ್ತದ ಕಲೆಗಳಿದ್ದವು. ಚಾಕುವಿನಿಂದ ಚುಚ್ಚಿದ ಗಾಯಗಳಿದ್ದ 37 ವರ್ಷದ ವ್ಯಕ್ತಿಯ ದೇಹ ರಕ್ತದ ಮಡುವಿನಲ್ಲಿತ್ತು. ಮಹಿಳೆ ಹಾಸಿಗೆ ಪಕ್ಕದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಬಳಿಕ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ವಿರುದ್ಧ ಹತ್ಯೆ ಕೇಸ್ ದಾಖಲಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.