ಸೋಮವಾರ, ನವೆಂಬರ್ 23, 2020
22 °C

ವೃತ್ತಿರಂಗ: ಮಹಿಳೆಯರ ಪಾಲು ಶೇ 25 ಮಾತ್ರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ : ಭಾರತದ ವೃತ್ತಿ ಕ್ಷೇತ್ರದಲ್ಲಿ ಮಹಿಳೆಯರ ಪಾಲು ಶೇ 25ರಷ್ಟು ಮಾತ್ರ. ಜಾಗತಿಕ ಮಟ್ಟದಲ್ಲಿ ಇದು ಶೇ 49ರಷ್ಟಿದೆ ಎಂದು ವಾಧ್ವಾನಿ ಫೌಂಡೇಶನ್‌ ಹೇಳಿದೆ. ಮಹಿಳಾ ಉದ್ಯಮಶೀಲತಾ ದಿನವಾದ ಗುರುವಾರ ಸಂಸ್ಥೆಯು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಈ ಮಾಹಿತಿ ಇದೆ. ಭಾರತವು ಮಹಿಳಾ ಉದ್ಯಮಿಗಳ ಪ್ರತಿಭೆಯನ್ನು ಇನ್ನೂ ಬಳಸಿಕೊಂಡಿಲ್ಲ, ಈ ದಿಸೆಯಲ್ಲಿ ಕೆಲಸ ಮಾಡುವುದು ಈಗಿನ ಅಗತ್ಯ ಎಂದು ಸಂಸ್ಥೆಯು ಪ್ರತಿಪಾದಿಸಿದೆ.

ಇದನ್ನು ಓದಿ: ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

ಭಾರತದಲ್ಲಿ ಉದ್ಯಮಶೀಲತೆಯು ಬೆಳೆಯುತ್ತಿದೆ. ಆದರೆ, ಇಲ್ಲಿಯೂ ಮಹಿಳೆಯರ ಪ್ರಮಾಣ ಕಡಿಮೆ ಇದೆ. ಗ್ರಾಮೀಣ ಪ್ರದೇಶಕ್ಕೂ ಸಮಾನ ಒತ್ತು ನೀಡಿ ಬೆಂಬಲ ವ್ಯವಸ್ಥೆ ಮತ್ತು ಸಮಗ್ರ ನೀತಿ ಚೌಕಟ್ಟು ರೂಪಿಸಬೇಕು ಎಂದು ಸಂಸ್ಥೆಯು ಸಲಹೆ ನೀಡಿದೆ. ಭಾರತ ಮತ್ತು ಇತರ ದೇಶಗಳಲ್ಲಿ ಉದ್ಯಮಶೀಲತೆ ವ್ಯವಸ್ಥೆ ಅಭಿವೃದ್ಧಿಪಡಿಸುವುದಕ್ಕಾಗಿ ಸಂಸ್ಥೆಯು ಕೆಲಸ ಮಾಡುತ್ತಿದೆ. ಭಾರತದಲ್ಲಿ 6.3 ಕೋಟಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿವೆ. ಅದರಲ್ಲಿ ಶೇ 6ರಷ್ಟು ಮಾತ್ರ ಮಹಿಳೆಯರ ಮುಂದಾಳುತ್ವದಲ್ಲಿ ನಡೆಯುತ್ತಿವೆ. ಈ ಕ್ಷೇತ್ರದಲ್ಲಿ ಮಹಿಳೆಯರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿದೆ ಎಂದು ಸಂಸ್ಥೆಯು ಹೇಳಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಭಾರತದ ಉದ್ಯಮಿಗಳಲ್ಲಿ ಮಹಿಳೆಯರ ಪಾಲು ಶೇ 14 ರಷ್ಟು ಮಾತ್ರ. ಹಾಗಾಗಿ, ಮಹಿಳೆಯರ ಉದ್ಯಮ ಸಾಮರ್ಥ್ಯ ಬಳಸಿಕೊಳ್ಳುವ ಅವಕಾಶ ಈ ದೇಶಕ್ಕೆ ಇದೆ.
-ಅಜಯ್‌ ಕೇಲ, ವಾಧ್ವಾನಿ ಫೌಂಡೇಶನ್‌ನ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು