ಗುರುವಾರ , ನವೆಂಬರ್ 26, 2020
22 °C

ತೇಜಸ್ವಿ ಯಾದವ್‌ ಬಿಹಾರದ ಸಿಎಂ ಆದರೆ ಅಚ್ಚರಿ ಇಲ್ಲ: ಸಂಜಯ್‌ ರಾವುತ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಬಿಹಾರ ವಿಧಾನಸಭಾ ಚುನಾವಣೆಯ ನಂತರ ರಾಷ್ಟ್ರೀಯ ಜನತಾದಳದ ನಾಯಕ ತೇಜಶ್ವಿ ಯಾದವ್ ಮುಖ್ಯಮಂತ್ರಿಯಾದರೆ ಆಶ್ಚರ್ಯಪಡಬೇಕಾಗಿಲ್ಲ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್‌ ಶನಿವಾರ ಹೇಳಿದ್ದಾರೆ.

ಪುಣೆಯ ಪತ್ರಕರ್ತರ ಸಂಘ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾವುತ್‌, ಉತ್ತರದ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಗಳತ್ತ ಎಲ್ಲ ಕಣ್ಣುಗಳಿವೆ.

'ಅಲ್ಲಿ, ಯಾವುದೇ ಬೆಂಬಲವಿಲ್ಲದ ಯುವಕನೊಬ್ಬನಿದ್ದಾನೆ. ಸಿಬಿಐ ಮತ್ತು ಇಡಿಯಂತಹ ತನಿಖಾ ಸಂಸ್ಥೆಗಳು ಅವನನ್ನು ಕಾಡುತ್ತಿವೆ. ಆತ ಕೇಂದ್ರ ಸರ್ಕಾರಕ್ಕೇ ಸವಾಲು ಹಾಕುತ್ತಿದ್ದಾನೆ. ಹೀಗಾಗಿ ಇದು, ವಿರೋಧ ಪಕ್ಷಗಳಿಗೆ ಆಶ್ಚರ್ಯ ಉಂಟು ಮಾಡುತ್ತಿದೆ' ಎಂದು ಸೇನಾ ನಾಯಕ ತೇಜಸ್ವಿ ಉಲ್ಲೇಖಿಸಿ ಹೇಳಿದರು.

'ಆದ್ದರಿಂದ, ಅವರು ಬಿಹಾರದ ಮುಖ್ಯಮಂತ್ರಿಯಾದರೆ ನನಗೆ ಆಶ್ಚರ್ಯವಾಗುವುದಿಲ್ಲ' ಎಂದು ರಾವುತ್‌ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು