ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಜ್‌ ಫ್ಲಾಯ್ಡ್‌ ಮಗಳ ಮಾತನ್ನು ಮರೆಯಲು ಸಾಧ್ಯವಿಲ್ಲ: ಜೊ ಬೈಡನ್

‘ಅಪ್ಪ ಜಗತ್ತನ್ನೇ ಬದಲಾಯಿಸಿದರು’ ಎಂದಿದ್ದ ಜಿಯಾನ
Last Updated 21 ಆಗಸ್ಟ್ 2020, 14:06 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ವರ್ಣಬೇಧದ ವಿರುದ್ಧ ಹೋರಾಟಕ್ಕೆ ಕರೆ ನೀಡಿರುವ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಜೊ ಬೈಡನ್, ಜಾರ್ಜ್‌ ಫ್ಲಾಯ್ಡ್ ಅವರ ಆರು ವರ್ಷ ಮಗಳು ಜಿಯಾನ ಜೊತೆಗಿನ ಸಂವಾದವನ್ನು ನೆನಪಿಸಿಕೊಂಡಿದ್ದಾರೆ.

‘ಫ್ಲಾಯ್ಡ್ ಅಂತ್ಯಕ್ರಿಯೆ ಮುನ್ನಾ ದಿನ ನಾನು ಜಿಯಾನ ಜೊತೆಗೆ ಮಾತುಕತೆ ನಡೆಸಿದ್ದೆ. ಆಕೆ ಧೈರ್ಯವಂತೆ. ಆಕೆಯ ಜೊತೆಗಿನ ಮಾತುಕತೆ ಮರೆಯಲು ಸಾಧ್ಯವಿಲ್ಲ. ಆಕೆಯ ಜೊತೆ ಮಾತನಾಡಲು ನಾನು ಬಗ್ಗಿದ ವೇಳೆ ಆಕೆ ನನ್ನ ಕಣ್ಣಲ್ಲಿ ಕಣ್ಣನಿಟ್ಟು, ‘ಅಪ್ಪ ಜಗತ್ತನ್ನೇ ಬದಲಾಯಿಸಿದರು’ ಎಂದ ಮಾತು ನನ್ನ ಹೃದಯದಲ್ಲಿ ಆಳವಾಗಿ ಉಳಿದಿದೆ. ಅಮೆರಿಕದಲ್ಲಿ ವರ್ಣಬೇಧದ ವಿರುದ್ಧದ ಸಿಡಿದೇಳಲು ಫ್ಲಾಯ್ಡ್‌ ಸಾವು ಕಾರಣವಾಯಿತು’ ಎಂದು ಬೈಡನ್‌ ಹೇಳಿದ್ದಾರೆ.

ಕಳೆದ ಮೇ ತಿಂಗಳಲ್ಲಿಪೊಲೀಸ್‌ ಕಸ್ಟಡಿಯಲ್ಲಿ ಕಪ್ಪು ವರ್ಣೀಯ ಜಾರ್ಜ್‌ ಫ್ಲಾಯ್ಡ್ ಮೃತಪಟ್ಟಿದ್ದರು.‘ಇದೊಂದು ಜನಾಂಗೀಯ ದ್ವೇಷದ ಕೃತ್ಯ’ ಎಂದು ಕಪ್ಪು ವರ್ಣೀಯರು ಅಮೆರಿಕದಾದ್ಯಂತ ಪ್ರತಿಭಟನೆ ನಡೆಸಿದ್ದರು. ಈ ಹೋರಾಟಕ್ಕೆ ವಿಶ್ವದಾದ್ಯಂತ ಬೆಂಬಲ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT