ಭಾನುವಾರ, ಸೆಪ್ಟೆಂಬರ್ 19, 2021
31 °C

ಉತ್ತರಪ್ರದೇಶವನ್ನು ಹೂಡಿಕೆಯ ನೆಚ್ಚಿನ ತಾಣವಾಗಿಸಿದ ಯೋಗಿ: ಜೆ.ಪಿ.ನಡ್ಡಾ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಲಖನೌ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅಡಳಿತದಲ್ಲಿ ಉತ್ತರಪ್ರದೇಶವು ಹೂಡಿಕೆಯ ನೆಚ್ಚಿನ ತಾಣವಾಗಿ ಬದಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಭಿಪ್ರಾಯಪಟ್ಟಿದ್ದಾರೆ.

ನಡ್ಡಾ ಅವರು ಇಂದು (ಶನಿವಾರ) ತಮ್ಮ ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸಿದರು.

ಈ ವೇಳೆ ನಡ್ಡಾ ಅವರು, ʼಉದ್ಯಮಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶವು ಇಂದು ಎರಡನೇ ಸ್ಥಾನದಲ್ಲಿದೆ. ತಲಾದಾಯವು ದ್ವಿಗುಣಗೊಂಡಿದೆ. ರಾಜ್ಯವು ಯೋಗಿ ಸರ್ಕಾರದ ಅಡಿಯಲ್ಲಿ ಹೂಡಿಕೆಯ ನೆಚ್ಚಿನ ತಾಣವಾಗಿ ಬದಲಾಗಿದೆʼ ಎಂದು ಹೇಳಿದ್ದಾರೆ.

ಉತ್ತರಪ್ರದೇಶವು ʼಒಂದು ರಾಷ್ಟ್ರ-ಒಂದು ಪಡಿತರ ಚೀಟಿʼ ಯೋಜನೆಯನ್ನು ಅಳವಡಿಸಿಕೊಂಡ ಮೊದಲ ರಾಜ್ಯವೂ ಹೌದು ಎಂದು ಶ್ಲಾಘಿಸಿದ್ದಾರೆ.

ಮುಂದುವರಿದು, ʼನಿಮ್ಮ ಕ್ಷೇತ್ರಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವುದು ಹಾಗೂ ಅಡುಗೆ ಅನಿಲ ಸೌಲಭ್ಯ ಹೊಂದಿಲ್ಲದವರನ್ನು ಗುರುತಿಸಿ ಸೌಲಭ್ಯವನ್ನು ತಲುಪಿಸುವ ಹೊಣೆ ನಿಮ್ಮದೇʼ ಎಂದು ಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಸ್ಥಳೀಯ ನಾಯಕರಿಗೆ ನಡ್ಡಾ ಸೂಚಿಸಿದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಕಟಗೊಂಡ ʼಉದ್ಯಮಸ್ನೇಹಿʼ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರಪ್ರದೇಶ ಮೊದಲನೇ ಮತ್ತು ಉತ್ತರಪ್ರದೇಶ ಎರಡನೇ ಸ್ಥಾನದಲ್ಲಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು