ಮಂಗಳವಾರ, ಮೇ 17, 2022
26 °C

ಪ್ರಧಾನಿ ನರೇಂದ್ರ ಮೋದಿ ಸಹೋದರನ ಹೆಸರಿನಲ್ಲಿ ಹಣ ಸಂಗ್ರಹ: ಯುವಕನ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸುಲ್ತಾನಪುರ(ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರನ ಹೆಸರಿನಲ್ಲಿ ಹಣ ಸಂಗ್ರಹಿಸಿದ ಆರೋಪದಡಿ ಯುವಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.

‘ಜಿತೇಂದ್ರ ತಿವಾರಿ ಅಲಿಯಾಸ್‌ ಜೀತು ಎಂಬಾತ ಪ್ರಧಾನಿಯ ಸಹೋದರನ ಹೆಸರಿನಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದಾನೆ ಎಂಬ ಮಾಹಿತಿಯನ್ನು ಪ್ರಧಾನ ಮಂತ್ರಿ ಕಚೇರಿಯು ನೀಡಿತ್ತು. ಈ ಮಾಹಿತಿಯ ಆಧಾರದ ಮೇಲೆ ತಿವಾರಿಯನ್ನು ವಿಕಾಸ್‌ ಭವನದ ಬಳಿ ಸೋಮವಾರ ಬಂಧಿಸಲಾಗಿದೆ’ ಎಂದು ನಗರ ಪೊಲೀಸ್‌ ಠಾಣೆಯ ವರಿಷ್ಠಾಧಿಕಾರಿ ಭುಪೇಂದ್ರ ಸಿಂಗ್‌ ಅವರು ಹೇಳಿದರು.

‘ಗುಜರಾತ್‌ನ ಮಾಧವ್‌ಪುರದಲ್ಲಿ ಜನವರಿ 4 ರಂದು ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಪ್ರಸ್ತಾಪಿಸಿದ ಕಾರ್ಯಕ್ರಮವೊಂದರ ಪೋಸ್ಟರ್‌ ಅನ್ನು ತಿವಾರಿ ತನ್ನ ಕಾರಿನಲ್ಲಿ ಅಂಟಿಸಿಕೊಂಡಿದ್ದನು’ ಎಂದು ಪೊಲೀಸರು ಮಾಹಿತಿ ನೀಡಿದರು.

ಇದನ್ನೂ ಓದಿ... ಡ್ರಗ್ಸ್‌ ಪ್ರಕರಣ: ದಾವೂದ್‌ ಇಬ್ರಾಹಿಂ ಸಹಚರ ಪರ್ವೇಜ್‌ ಖಾನ್‌ ಬಂಧನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು