ಸೋಮವಾರ, ಅಕ್ಟೋಬರ್ 18, 2021
25 °C

ಉದ್ಯೋಗದ ಕೊರತೆಯಿಂದಾಗಿ ಉತ್ತರಾಖಂಡದ ಯುವಕರು ವಲಸೆ ಹೋಗುವಂತಾಗಿದೆ: ಕೇಜ್ರಿವಾಲ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಉತ್ತರಾಖಂಡದ ಯುವಕರು ರಾಜ್ಯದಲ್ಲಿ ಉದ್ಯೋಗಾವಕಾಶಗಳ ಕೊರತೆಯಿಂದಾಗಿ ವಲಸೆ ಹೋಗುವಂತಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದರು.

ಭಾನುವಾರ ರಾಜ್ಯಕ್ಕೆ ಭೇಟಿ ನೀಡಿದಾಗ ಅವರೊಂದಿಗೆ ಮಾತನಾಡುವುದಾಗಿ ತಿಳಿಸಿದ ಅವರು, ಉತ್ತರಾಖಂಡದ ಯುವಕರು ರಾಜ್ಯದಲ್ಲಿಯೇ ಉದ್ಯೋಗ ಪಡೆಯುವಂತಾಗಬೇಕು ಎಂದರು.

'ನಾಳೆ ನಾನು ಉತ್ತರಾಖಂಡಕ್ಕೆ ಹೋಗುತ್ತಿದ್ದೇನೆ. ಯುವಕರು ಉದ್ಯೋಗಾವಕಾಶದ ಕೊರತೆಯಿಂದಾಗಿ ವಲಸೆ ಹೋಗುವಂತಾಗಿದೆ. ಉತ್ತರಾಖಂಡದ ಯುವಕರು ಅಲ್ಲಿಯೇ ಉದ್ಯೋಗವನ್ನು ಪಡೆಯಬೇಕು. ಸ್ಪಷ್ಟ ಉದ್ದೇಶ ಹೊಂದಿರುವ ಸರ್ಕಾರವಿದ್ದರೆ ಹೀಗಾಗುವುದು ಸಾಧ್ಯವಿದೆ. ನಾಳೆ ನಾನು ಯುವಕರೊಂದಿಗೆ ಮಾತನಾಡುತ್ತೇನೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಮುಂದಿನ ವರ್ಷ ಉತ್ತರಾ ಖಂಡದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಎಎಪಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಅಭಿವೃದ್ಧಿ ಸಮಸ್ಯೆಗಳನ್ನು ಜನರ ಮುಂದಿಡಲಿದೆ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು