ಹೈದರಾಬಾದ್ (ಪಿಟಿಐ):ವೈಎಸ್ಆರ್ ತೆಲಂಗಾಣ ಪಕ್ಷದ (ವೈಎಸ್ಆರ್ಟಿಪಿ) ಮುಖ್ಯಸ್ಥೆ ವೈ.ಎಸ್. ಶರ್ಮಿಳಾ ಅವರಿಗೆ ಬುಧವಾರ ಇಲ್ಲಿನ ನಗರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ತಮ್ಮ ಬೆಂಗಾವಲು ಪಡೆಯ ಮೇಲೆ ಮಾಡಿದ್ದ ದಾಳಿಯನ್ನ ಖಂಡಿಸಿ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಕಚೇರಿ ಎದುರು ಪ್ರತಿಭಟಿಸಲು ತೆರಳುತ್ತಿದ್ದವೈ.ಎಸ್. ಶರ್ಮಿಳಾ ಅವರನ್ನು ತೆಲಂಗಾಣ ಪೊಲೀಸರು ಮಂಗಳವಾರ ಬಂಧಿಸಿದ್ದರು.

ಕೆಸಿಆರ್ ಕಚೇರಿಗೆ ಕಾರಿನಲ್ಲಿ ತೆರಳುತ್ತಿದ್ದ ಶರ್ಮಿಳಾ ಅವರನ್ನು ಅವರು ಕಾರಿನ ಡ್ರೈವಿಂಗ್ ಸೀಟಿನಲ್ಲಿ ಕುಳಿತಿರುವಾಗಲೇ ಪೊಲೀಸರು ಕ್ರೇನ್ ಬಳಸಿ ಎಳೆದುಕೊಂಡು ಹೋಗಿದ್ದರು. ಬಳಿಕ ಶರ್ಮಿಳಾ ಅವರ ಸೀಟಿನ ಬೆಲ್ಟ್ ಬಿಚ್ಚಿಸಿ ಬಲವಂತವಾಗಿ ಅವರನ್ನು ಕಾರಿನಿಂದ ಇಳಿಸಿ, ಬಂಧಿಸಿದ್ದರು.

ಶರ್ಮಿಳಾ ಅವರ ಬಂಧನ ರೀತಿ ಮತ್ತು ಸುರಕ್ಷತೆಯ ಕುರಿತು ತೆಲಂಗಾಣದ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ರಾಜಭವನ ಮಂಗಳವಾರ ರಾತ್ರಿ ಪ್ರಕಟಣೆ ಹೊರಡಿಸಿದೆ.

ಟಿವಿ ದೃಶ್ಯಾವಳಿಗಳನ್ನು ಗಮನಿಸಿದ ಅವರು ಯಾವುದೇ ರಾಜಕೀಯ ಹಿನ್ನೆಲೆ ಅಥವಾ ಸಿದ್ಧಾಂತಗಳು ಇರಲಿ ಮಹಿಳಾ ನಾಯಕಿಯರಿಗೆ ಮತ್ತು ಕಾರ್ಯಕರ್ತರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಪ್ರಕಟಣೆ ಹೊರಡಿಸಿದ್ದಾರೆ.

ಟಿಆರ್ಎಸ್ ಸರ್ಕಾರದ ವರ್ತನೆಗೆ ಜನ ಮತ್ತು ದೇವರೇ ಉತ್ತರ ನೀಡುತ್ತಾರೆ ಎಂದು ಶರ್ಮಿಳಾ ಅವರ ತಾಯಿ ವಿಜಯಮ್ಮ ಕಿಡಿಕಾರಿದ್ದಾರೆ.

ಕಾನೂನು ಸುವ್ಯವಸ್ಥೆ ದೃಷ್ಟಿಯಿಂದಶರ್ಮಿಳಾ ಅವರನ್ನು ವಾರಂಗಲ್ನಲ್ಲಿ ತಡೆದು ಬೆಂಗಾವಲು ಪಡೆಯೊಂದಿಗೆ ಹೈದರಾಬಾದ್ಗೆ ವಾಪಸ್ ಕಳುಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.