ಮುಂಬೈ; ಮುಂಬೈ ಕ್ರೂಸ್ ಹಡಗಿನ ಡ್ರಗ್ಸ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಳದ (ಎನ್.ಸಿ.ಬಿ) ಅಧಿಕಾರಿ ಸಮೀರ್ ವಾಂಖೆಡೆ ಅವರಿಗೆ ಝಡ್ ಮಾದರಿ ಭದ್ರತೆ ನೀಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ.

ಟ್ವಿಟರ್ನಲ್ಲಿ ಇಂದು ಈ ವಿಷಯವಾಗಿ #ZSecurityForSameerWankhede,#Z_Plus_Security_4_Sameerji ಎಂಬ ಹ್ಯಾಶ್ ಟ್ಯಾಗ್ಗಳು ಟ್ರೆಂಡ್ ಆಗಿವೆ. ಸಮೀರ್ ವಾಂಖೆಡೆ ಅವರು ಎನ್.ಸಿ.ಬಿಯ ಮಹಾರಾಷ್ಟ್ರ ವಲಯದ ನಿರ್ದೇಶಕರಾಗಿದ್ದಾರೆ.

‘ಇದೊಂದು ಹೈ ಪ್ರೊಫೈಲ್ ಕೇಸ್ ಆಗಿದ್ದು, ದೊಡ್ಡ ದೊಡ್ಡ ಡ್ರಗ್ಸ್ ಡೀಲರ್ಗಳು, ಪೆಡ್ಲರ್ಗಳು ಸಮೀರ್ ವಾಂಖೆಡೆ ಅವರ ತನಿಖೆಯಿಂದ ಬೆಚ್ಚಿ ಬಿದ್ದಿದ್ದಾರೆ. ಹೀಗಾಗಿ ಡ್ರಗ್ಸ್ ಲೋಕದಿಂದ ಈ ಅಧಿಕಾರಿಗೆ ಏನು ಬೇಕಾದರೂ ಆಗಬಹುದು. ಹೀಗಾಗಿ ಅವರಿಗೆ ಹೆಚ್ಚಿನ ಭದ್ರತೆ ನೀಡಬೇಕು‘ ಎಂದು ಕೇಳಿಕೊಳ್ಳುತ್ತಿದ್ದಾರೆ.

‘ಮುಂಬೈ ಪೊಲೀಸರು ತಮ್ಮ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ’ ಎಂದುಸಮೀರ್ ವಾಂಖೆಡೆ ಆರೋಪಿಸಿದ ಬೆನ್ನಲ್ಲೆ ಈ ಅಭಿಯಾನ ಶುರುವಾಗಿದೆ.

ಏತನ್ಮಧ್ಯೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಗೃಹ ಸಚಿವ, ‘ಸಮೀರ್ ವಾಂಖೆಡೆ ನೀಡಿರುವ ದೂರು ನಮ್ಮ ಗಮನಕ್ಕೆ ಬಂದಿಲ್ಲ’ ಎಂದಿದ್ದಾರೆ.

ದೂರು ನೀಡಿದ ಸಮೀರ್ ವಾಂಖೆಡೆ

ಇಬ್ಬರು ಪೊಲೀಸ್ ಅಧಿಕಾರಿಗಳು ತಮ್ಮ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ ಎಂದು ಆರೋಪಿಸಿ ಕ್ರೂಸ್ ಡ್ರಗ್ಸ್ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿರುವ ಸಮೀರ್ ವಾಂಖೆಡೆ ಮುಂಬೈ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ.

ಎನ್ಸಿಬಿ ಅಧಿಕಾರಿಗಳ ಪ್ರಕಾರ, ವಾಂಖೆಡೆ ಅವರು ಇಲ್ಲಿನ ಒಶಿವರ ಉಪನಗರದಲ್ಲಿರುವ ತಮ್ಮ ತಾಯಿಯ ಸಮಾಧಿಗೆ ನಿಯಮಿತವಾಗಿ ಭೇಟಿ ನೀಡುತ್ತಿರುತ್ತಾರೆ. ಇವರ ಚಲನವಲನಗಳನ್ನು ಗಮನಿಸುವುದಕ್ಕಾಗಿ ಒಶಿವರ ಪೊಲೀಸ್ ಠಾಣೆಯ ಇಬ್ಬರು ಅಧಿಕಾರಿಗಳು ಈ ಸ್ಮಶಾನದಲ್ಲಿ ಸಿಸಿಟಿವಿ ಅಳವಡಿಸಿ, ಅದರಿಂದ ದೃಶ್ಯಾವಳಿಗಳನ್ನು ಸಂಗ್ರಹಿಸುತ್ತಿದ್ದಾರೆ.

ಈ ಕುರಿತು ವಾಂಖೆಡೆ ಅವರು ಪೊಲೀಸ್ ಅಧಿಕಾರಿಗಳ ಚಟುವಟಿಕೆ ಕುರಿತು ಮಹಾರಾಷ್ಟ್ರದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ, ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ.

ಅಕ್ಟೋಬರ್ 3 ರಂದು ವಾಂಖೆಡೆ ಮತ್ತು ತಂಡ, ಮುಂಬೈನ ಕರಾವಳಿಯಲ್ಲಿ ಐಶಾರಾಮಿ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿ, ಮಾದಕ ವಸ್ತುಗಳೊಂದಿಗೆ ಬಾಲಿವುಡ್ ನಟ ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಮತ್ತಿತರರನ್ನು ಬಂಧಿಸಿದ್ದರು.

ಇದನ್ನೂ ಓದಿ:ಚುನಾವಣೆಯ ಸೋಲಿನ ಬೇಸರ: ತೆಲುಗು ಸಿನಿಮಾ ಕಲಾವಿದರ ಸಂಘ ತೊರೆದ ನಟ ಪ್ರಕಾಶ್ ರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.