ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೇಕ್‌ಅಪ್‌ ಆಯ್ತಾ? ಎದೆಗುಂದಬೇಡಿ, ಇಲ್ಲಿದೆ ಕೆಲವು ಸಲಹೆಗಳು

Last Updated 5 ನವೆಂಬರ್ 2019, 11:06 IST
ಅಕ್ಷರ ಗಾತ್ರ

ಬ್ರೇಕ್‌ಅಪ್‌ಗಳು ಮೊಡವೆಗಳಿದ್ದಂತೆ. ಅದು ನೋವು ಕೊಡುತ್ತದೆ, ನಿಮ್ಮನ್ನು ಸಾಮಾಜಿಕವಾಗಿ ಬೆರೆಯದಂತೆ ಮಾಡುತ್ತದೆ ಮತ್ತು ಸಾಕಷ್ಟುಸಲಹೆಗಳನ್ನು ಆಹ್ವಾನಿಸುತ್ತದೆ.

ನಿಮ್ಮ ಸ್ನೇಹಿತರು ಸೆಕ್ಸ್‌ ಎಂಡ್‌ ಸಿಟಿ ರಿಲೆಶನ್‌ಷಿಪ್‌ಓದಿದ್ದರೆ ಒಂದಿಷ್ಟು ಐಸ್‌ಕ್ರೀಂ ತಿನ್ನಲು ಸಲಹೆಕೊಡಬಹುದು, ಕಾಕ್‌ಟೇಲ್‌ ಪಾರ್ಟಿಗೆ ಕೆರೆದೊಯ್ಯಬಹುದು. ಇನ್ನು ಕೆಲವರು ಡೇಟಿಂಗ್‌ ಆ್ಯಪ್‌ ಡೌನ್‌ಲೋಡ್‌ ಮಾಡು ಎಂದು ಸೂಚಿಸಬಹುದು. ಮತ್ತಷ್ಟು ಮಂದಿ ‘ಇದೆಲ್ಲವನ್ನೂ ಮುಗಿಸಿಕೊಂಡು ಬಿಡು’ ಎಂದು ಹೇಳಬಹುದು.

ಯಾರು ಏನೇ ಹೇಳಿದರು ಯಾವುದನ್ನು ತೆಗೆದುಕೊಳ್ಳಬೇಕು, ಹೇಗೆ ನಿಭಾಯಿಸಬೇಕು ಎನ್ನುವುದನ್ನು ನೀವೇ ನಿರ್ಧರಿಸಬೇಕು. ಪ್ರೀತಿಯಲ್ಲಿ ಸೋತ ದೇವದಾಸ್‌ ಆಗುತ್ತೀರೊ ಅಥವಾ ಕ್ವೀನ್‌ ಸಿನಿಮಾದಲ್ಲಿ ಕಂಗನಾ ರೀತಿ ಹೊಸತನದೊಂದಿಗೆ ಜಗತ್ತನ್ನು ನೋಡುವುದನ್ನು ಕಲಿತುಕೊಳ್ಳುತ್ತೀರೊ ಎನ್ನುವುದು ನಿಮ್ಮ ಆಯ್ಕೆಯಾಗಿರುತ್ತದೆ. ಬ್ರೇಕ್‌ಅಪ್‌ ಆದ ಕೂಡಲೇ ಎದೆಗುಂದುವುದು ಬೇಡ. ಅದನ್ನು ನಿಭಾಯಿಸುವುದಕ್ಕೆ ಇಲ್ಲಿದೆ ಒಂದಿಷ್ಟು ಕೂಲ್ ಕೂಲ್‌ ಸಲಹೆಗಳು.

ಸಮಯ ತೆಗೆದುಕೊಳ್ಳಿ

ಆ ಪರಿಸ್ಥಿತಿಯಿಂದ ಹೊರಗೆ ಬರುಲು ನಿಮ್ಮದೆಯಾದ ಸಮಯ ತೆಗೆದುಕೊಳ್ಳಿ. ಗೆಳೆಯ/ಗೆಳತಿ ಬಿಟ್ಟು ಹೋದ ನೋವಿದ್ದರೂ ನನಗೇನು ಆಗಿಲ್ಲ ಎಂದು ತೋರಿಸಿಕೊಳ್ಳುವ ಅಗತ್ಯವಿಲ್ಲ. ಸ್ನೇಹಿತರೊಂದಿಗೆ ಸ್ಪಲ್ಪ ಸಮಯ ಮಾತನಾಡಿದಾಗ, ಒಂದು ಪಾರ್ಟಿ ಮಾಡಿದಾಗ ನಿಮಗೆ ತಾನು ಗಟ್ಟಿಗನೆಂದು ಅನ್ನಿಸುತ್ತದೆ. ಆದರೆ, ಕೆಲ ಸಮಯದ ನಂತರ ಅದು ಮುಸುಕಾಗುತ್ತದೆ. ನೆನಪಿಡಿ, ದುಃಖಿಸುವುದು ಯಾವತ್ತು ದೌರ್ಬಲ್ಯದ ಸಂಕೇತವಲ್ಲ. ನೀವು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೀರಿ ಮತ್ತು ಅದು ಧೈರ್ಯವೇ ಸರಿ. ಇಂತಹ ಪರಿಸ್ಥಿತಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಿರುತ್ತಾದರೂ ಕ್ರಮೇಣ ಅವೆಲ್ಲವನ್ನೂ ಒಂದುಗೂಡಿ ನೋಡಿದಾಗ ಬಹುತೇಕ ಎಲ್ಲರದ್ದೂ ಒಂದೇ ಎನಿಸುತ್ತದೆ. ಏಕೆಂದರೆ, ಒಂದು ವರ್ಷದಲ್ಲಿ ಸಂಬಂಧವನ್ನು ನೆನಪಿಸುವಂತ ದಿನಗಳು (ಹುಟ್ಟುಹಬ್ಬ, ಪ್ರೀತಿ ನಿವೇದಿಸಿದ ದಿನ...) ಮನಸ್ಸಿನ ಪಟಲದಲ್ಲಿ ಹಾದು ಹೋಗಿ ನಿಮ್ಮ ಗೆಳತಿ/ಗೆಳೆಯನ ನೆನಪಾಗಿ ದುಃಖ ತಂದಿರುತ್ತದೆ.

ನಿಮ್ಮನ್ನು ನೀವು ಅರಿತುಕೊಳ್ಳಿ

ನಿಮ್ಮ ಸಂಗಾತಿಗಾಗಿ ನಿಮ್ಮಲ್ಲಿನ ಕೆಲವನ್ನು ಸಂಗತಿಗಳನ್ನು ಬಿಟ್ಟಿರುತ್ತೀರಿ. ನಿಮ್ಮ ಅಭ್ಯಾಸ, ಹವ್ಯಾಸ ಏನಾದರು ಆಗಿರಬಹುದು. ಬ್ರೇಕ್‌ಅಪ್‌ ನಂತರ ಅದೆಲ್ಲವನ್ನು ಮರು ಪಡೆದುಕೊಳ್ಳಲು ಯತ್ನಿಸಿ. ನೀವು ನೀವಾಗಿರಲು ಏನೆಲ್ಲ ಮಾಡಬೇಕು ಅದನ್ನು ಮಾಡಿ. ಬಿಟ್ಟು ಹೋಗಿರುವ ನಿಮ್ಮ ಸಂಗಾತಿ ನಿಮ್ಮ ಜೀವನದಲ್ಲಿ ಬಂದಿರದ ಸಮಯದಲ್ಲಿ ನೀವು ಹೇಗಿದ್ದೀರಿ ಎನ್ನುವುದನ್ನು ಯೋಚಿಸಿ. ಹಾಗೆ ಇರಲು ಯತ್ನಿಸಿ. ಡ್ಯಾನ್ಸ್‌ ಕಲಿಯಿರಿ, ಸಿನಿಮಾ ನೋಡಿ, ಹಾಡು ಕೇಳಿ... ಹೀಗೆ ನಿಮ್ಮ ಸಂಗಾತಿಯೊಂದಿಗಿದ್ದಾಗ ಏನೆಲ್ಲ ಮಾಡಲು ಸಾಧ್ಯವಾಗುತ್ತಿರಲಿಲ್ಲ ಅವೆಲ್ಲವನ್ನೂ ಮಾಡಿ. ನಿಮ್ಮನ್ನು ನೀವು ಅರಿತು ಬದುಕುವುದುನ್ನು ಕಲಿಯಿರಿ.

ಸಕಾರಾತ್ಮಕ ಚಿಂತನೆ ನಿಮ್ಮದಾಗಿರಲಿ

ಹೊಸ ಜನರೊಂದಿಗೆ ಹೊಸದೇ ಚಿಂತನೆಗಳನ್ನು ಮಾಡುವವರೊಂದಿಗೆ ಬೆರೆಯಿರಿ. ಆಗ ಹಳೆಯ ಯೋಚನೆಗಳು ನಿಮ್ಮನ್ನು ಬಾಧಿಸುವುದಿಲ್ಲ. ಹೊಸ ಸ್ಥಳಗಳಿಗೆ ಹೋಗಿ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತಾ ಹೋದಂತೆ ನಿಮ್ಮ ಚಿಂತನೆಗಳು ಬದಲಾಗುತ್ತಾ ಹೋಗುತ್ತವೆ.

ತಾತ್ಕಾಲಿಕ ಪರಿಹಾರಗಳಿಂದ ದೂರವಿರಿ

ಬಿರುಕುಬಿಟ್ಟ ಸಂಬಂಧ ಒಂದು ನಿಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ ಅಥವಾ ನಿಷ್ಕ್ರಿಯರನ್ನಾಗಿಸುತ್ತದೆ. ನೋವು ಎಂದು ತಾತ್ಕಾಲಿಕ ಪರಿಹಾರ ಎನಿಸುವ ಮದ್ಯ, ಡ್ರಗ್ಸ್‌ಗಳಿಗೆ ಎಂದೂ ದಾಸರಾಗಬೇಡಿ. ಅವೆಲ್ಲವುಗಳಿಂದ ದೂರವಿದ್ದು, ನಿಮ್ಮೊಳಗಿನ ಸ್ವಪ್ರೀತಿಯನ್ನು ಹೆಚ್ಚಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT