ಬೆಂಗಳೂರು: 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಆನ್‌ಲೈನ್ ನೋಂದಣಿ ಮಂಗಳವಾರ(ಮಾರ್ಚ್ 21) ಮಧ್ಯಾಹ್ನಕ್ಕೆ ಅಂತ್ಯವಾಗಿದ್ದು, ಇದು ವಿಸ್ತರಣೆಯಾಗುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ ತಿಳಿಸಿದರು.
ಚಿತ್ರೋತ್ಸವದ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳದೇ ಇರುವವರು ಅಥವಾ ನೋಂದಣಿ ವೇಳೆ ತಾಂತ್ರಿಕ ಸಮಸ್ಯೆಯಿಂದ ಪಾಸ್ ಪಡೆದುಕೊಳ್ಳಲು ಸಾಧ್ಯವಾಗದೇ ಇರುವವರು ಚಿತ್ರೋತ್ಸವ ನಡೆಯುವ ಸ್ಥಳಗಳಲ್ಲೇ ದಿನದ ಪಾಸ್ ಪಡೆದುಕೊಂಡು ಭಾಗವಹಿಸಬಹುದು ಎಂದು ಅವರು ತಿಳಿಸಿದರು.
ಪಾಸ್ ಗೊಂದಲ: ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡ ಹಲವರಿಗೆ ತಮ್ಮ ನೋಂದಣಿ ಯಶಸ್ವಿಯಾಗಿದೆಯೇ ಇಲ್ಲವೇ ಎನ್ನುವ ಯಾವುದೇ ಮಾಹಿತಿಯನ್ನು ವೆಬ್‌ಸೈಟ್ ನೀಡಿಲ್ಲ. ಇದು ಜನರನ್ನು ಗೊಂದಲಕ್ಕೆ ದೂಡಿತ್ತು. ನೋಂದಣಿ ಯಶಸ್ವಿಯಾಗಿದೆಯೇ ಇಲ್ಲವೇ ಎನ್ನುವುದನ್ನು ಎಸ್‌ಎಂಎಸ್ ಅಥವಾ ಮೇಲ್ ಮೂಲಕ ಅಕಾಡೆಮಿ ಸೂಕ್ತ ಕ್ರಮದಲ್ಲಿ ತಿಳಿಸದೇ ಇರುವುದೂ ಗೊಂದಲಕ್ಕೆ ಕಾರಣವಾಯಿತು.
‘ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡ ಮೂರು ಸಾವಿರಕ್ಕೂ ಅಧಿಕ ಜನರಿಗೆ ಈಗಾಗಲೇ ಪಾಸ್ ಕಳುಹಿಸಿಕೊಡಲಾಗಿದೆ. ವೆಬ್‌ಸೈಟ್‌ನ ಸರ್ವರ್ ಸಮಸ್ಯೆಯಿಂದ ಕೆಲವರಿಗೆ ಸಮಸ್ಯೆಯಾಗಿರಬಹುದು. ನೋಂದಣಿ ಮಾಡಿಕೊಂಡವರು ತಮ್ಮ ಪಾಸ್‌ಗಳನ್ನು ಎಲ್ಲಿಂದ ಪಡೆದುಕೊಳ್ಳುವುದಾಗಿ ನಮೂದಿಸಿರುವರೋ ಅಲ್ಲಿಂದ ಪಡೆದುಕೊಳ್ಳಬಹುದು’ ಎಂದು ಅಕಾಡೆಮಿಯ ಅಧಿಕಾರಿಯೊಬ್ಬರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.