ನವದೆಹಲಿ: ಕರ್ನಾಟಕದಲ್ಲಿ ದುರಸ್ತಿ ಹಾಗೂ ಪುನರ್ ನಿರ್ಮಾಣಕ್ಕೆ ಕಾದಿರುವ 19 ಸೇತುವೆಗಳನ್ನು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವಾಲಯ ಗುರುತಿಸಿದೆ.
ಹಳೆಯ ಸೇತುವೆಗಳ ಪಟ್ಟಿಯಲ್ಲಿ ಬೆಂಗಳೂರು–ನೆಲಮಂಗಲ ನಡುವಿನ ಪೀಣ್ಯ ಮೇಲ್ಸೇತುವೆಯೂ ಸೇರಿದೆ. ದುರಸ್ತಿಗೆ ಕಾದಿರುವ ಹಳೆಯ ಸೇತುವೆ ಗಳ ಪಟ್ಟಿಯಲ್ಲಿ ಕರಾವಳಿ ಹಾಗೂ ಮಲೆನಾಡಿನ 10 ಸೇತುವೆಗಳು ಇವೆ. ಕೆಲ ವೊಂದು ಸೇತುವೆಗಳು ತೀರಾ ಹಳೆಯದಾ ಗಿದ್ದು, ಅವುಗಳ ಮರು ನಿರ್ಮಾಣ ಮಾಡಬೇಕಿದೆ. ಕೆಲವೊಂದು ಸೇತುವೆ ಗಳ ತುರ್ತಾಗಿ ದುರಸ್ತಿ ಮಾಡಬೇಕಿದೆ ಎಂದೂ ಸಚಿವಾಲಯ ಹೇಳಿದೆ.
ರಾಷ್ಟ್ರೀಯ ಹೆದ್ದಾರಿ ಹಾಗೂ ಸೇತುವೆ ಗಳ ದುರಸ್ತಿ ಮತ್ತು ನಿರ್ವಹಣೆ ನಿರಂತರ ಪ್ರಕ್ರಿಯೆ. ಪ್ರತಿವರ್ಷ ಇದಕ್ಕೆ ಅನುದಾನ ಮೀಸಲಿಡಲಾಗುತ್ತದೆ ಎಂದೂ ಸಚಿವಾಲ ಯದ ಅಧಿಕಾರಿಯೊಬ್ಬರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.