ಬಿಬಿಎಂಪಿ ಎಂಜಿನಿಯರ್ ಮನೆಯಲ್ಲಿ ₹50 ಲಕ್ಷ ನಗದು

ಬೆಂಗಳೂರು: ಬಿಬಿಎಂಪಿ ಎಂಜಿನಿಯರ್ ಮನೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ನಡೆಸಿದ ಶೋಧದ ವೇಳೆ ₹50 ಲಕ್ಷ ನಗದು ಮತ್ತು ಒಂದೂಕಾಲು ಕೆ.ಜಿ ಚಿನ್ನ ದೊರೆತಿದೆ.
ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪದಲ್ಲಿ ಬೊಮ್ಮನಹಳ್ಳಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿ.ಟಿ. ಆಂಜನಪ್ಪ ಅವರ ಬೆಂಗಳೂರಿನ ಜೀವನಭಿಮಾನಗರದಲ್ಲಿನ ವಾಸದ ಮನೆ, ಸ್ವಂತ ಊರಾದ ದಾವಣಗೆರೆ ಜಿಲ್ಲೆಯ ಲೋಕಿಕೆರೆ ಗ್ರಾಮದ ವಾಸದ ಮನೆ, ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿಯಲ್ಲಿರುವ ತೋಟದ ಮನೆ, ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ಶುಕ್ರವಾರ ದಾಳಿ ನಡೆಸಲಾಗಿತ್ತು.
ಲೋಕಿಕೆರೆ ಗ್ರಾಮದಲ್ಲಿ 1 ಮನೆ, 8 ಎಕರೆ 21 ಗುಂಟೆ ಕೃಷಿ ಜಮೀನು, ಚನ್ನಗಿರಿ ತಾಲ್ಲೂಕಿನ ವಿವಿಧೆಡೆ 15 ಎಕರೆ 30 ಗುಂಟೆ ಕೃಷಿ ಜಮೀನು, 3 ಕಾರು, 5 ದ್ವಿಚಕ್ರ ವಾಹನ, 1 ಟ್ರ್ಯಾಕ್ಟರ್, 1 ಅಡಕೆ ಒಣಗಿಸುವ ಯಂತ್ರ, 1 ಅಡಕೆ ಸುಲಿಯುವ ಯಂತ್ರ, 1 ಕೆ.ಜಿ 250 ಗ್ರಾಂ ಚಿನ್ನಾರಣ, 8 ಕೆ.ಜಿ ಬೆಳ್ಳಿ ವಸ್ತುಗಳು, ₹50 ಲಕ್ಷ ನಗದು, 13.70 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ₹3.96 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆಎಂದು ಎಸಿಬಿ ಮಾಹಿತಿ ನೀಡಿದೆ.
ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿದಿದೆ. ಅಸಮತೋಲನ ಆಸ್ತಿ ಮೌಲ್ಯ ಶೇ 428.59ರಷ್ಟು ಎಂದು ಎಸಿಬಿ ಅಂದಾಜಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.